

ಕಂಪ್ಲಿ: ಪುರಾಣ ಪ್ರವಚನಗಳು ಬದುಕನ್ನು ಹಸನಗೊಳಿಸುತ್ತವೆ ಎಂದು ಬುಕ್ಕಸಾಗರ ಕರಿಸಿದ್ಧೇಶ್ವರ ಸಂಸ್ಥಾನಮಠದ ಶ್ರೀವಿಶ್ವಾರಾಧ್ಯ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ:ಜನರ ಹುಚ್ಚು ಬಿಡಿಸಿದ ಪವಾಡಪುರುಷ
ಇಲ್ಲಿನ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಶ್ರಾವಣ ಪ್ರಯುಕ್ತ ಪವಾಡಪುರುಷ ಮುಗಳಖೋಡ ಶ್ರೀಯಲ್ಲಾಲಿಂಗ ಮಹಾರಾಜರ ಲೀಲಾಮೃತ ಪುರಾಣ ಪ್ರವಚನದ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಪುರಾಣ ಪ್ರವಚನ ಆಲಿಸುವುದರಿಂದ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಿ ಪರಿಹಾರ ಕಂಡುಕೊಳ್ಳಲು ಪ್ರೇರಣೆ ದೊರಕುತ್ತದೆ ಎಂದರು.
ಪ್ರಮುಖರಾದ ಡಾ.ಜಗನ್ನಾಥ ಹಿರೇಮಠ, ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ಇಟಗಿ ಬಸವರಾಜಗೌಡ, ಕಲ್ಯಾಣಿಚೌಕಿಮಠದ ಬಸವರಾಜಶಾಸ್ತ್ರಿ, ಕೆ.ಎಂ.ಹೇಮಯ್ಯಸ್ವಾಮಿ, ವಾಲಿ ಕೊಟ್ರಪ್ಪ, ಎಸ್.ಡಿ.ಬಸವರಾಜ, ಕೆ.ವಿರುಪಾಕ್ಷಪ್ಪ, ಟಿ.ಎಚ್.ಎಂ.ಗುರುಮೂರ್ತಿ, ಉಳ್ಳಾಗಡ್ಡಿ ಮಲ್ಲಯ್ಯ, ಮಂಜುನಾಥಗೌಡ, ಸದಸ್ಯೆಯರಾದ ಎಂ.ಎಸ್.ಅಮೃತಾ, ಕಲ್ಗುಡಿ ರಾಜೇಶ್ವರಿ, ಶಾರದಾ ಹಿರೇಮಠ, ಕಲ್ಗುಡಿ ನಾಗರತ್ನ ಇತರರಿದ್ದರು.