

ಕುಂದಾಪುರ: ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದಲ್ಲಿ ಪಪೆಟ್ ಶೋ, ರೆಡ್ ಕಲರ್ ಡೇ ಹಾಗೂ ಆರೆಂಜ್ ಕಲರ್ ಡೇ ಕಾರ್ಯಕ್ರಮ ಜೂ.30 ಮತ್ತು ಜು.1ರಂದು ನಡೆಯಿತು.
ಪಪೆಟ್ ಶೋ ಕಾರ್ಯಕ್ರಮದಲ್ಲಿ ಆರೋಗ್ಯಕರ ಆಹಾರ ಪದ್ಧತಿಯಿಂದ ಆಗುವ ಉಪಯೋಗಗಳು ಮತ್ತು ಜಂಕ್ ಫುಡ್ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಮಕ್ಕಳಿಗೆ ವಾಹಿತಿ ನೀಡಲಾಯಿತು. ನರ್ಸರಿ ಮತ್ತು ಎಲ್ಕೆಜಿ ಮಕ್ಕಳಿಗೆ ರೆಡ್ ಕಲರ್ ಡೇ ಹಾಗೂ ಯುಕೆಜಿ ಮಕ್ಕಳಿಗೆ ಆರೆಂಜ್ ಕಲರ್ ಡೇ ಹಮ್ಮಿಕೊಳ್ಳಲಾಯಿತು.
ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳು ಕಲೆಯ ಮೂಲಕ ತಮ್ಮ ಕ್ರಿಯಾಶೀಲತೆ ಹಾಗೂ ಸೃಜನಾತ್ಮಕತೆ ಹೆಚ್ಚಿಸಿಕೊಳ್ಳಲು ವಿವಿಧ ಚಟುವಟಿಕೆ ನಡೆಸಲಾಯಿತು.