ಕುಮಾರಸ್ವಾಮಿ ಗೆಲುವಿಗೆ ತಿರುಪತಿಯಲ್ಲಿ ಪೂಜೆ

ಕುಮಾರಸ್ವಾಮಿ ಗೆಲುವಿಗೆ ತಿರುಪತಿಯಲ್ಲಿ ಪೂಜೆ
Published on

ಮದ್ದೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅತಿಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ತಾಲೂಕಿನ ನಂಬಿನಾಯಕನಹಳ್ಳಿ ಗ್ರಾಮದ ಸುರೇಶ್‌ಗೌಡ್ರು ಅಭಿಮಾನಿ ಬಳಗದ ಯುವಕರು ತಿರುಪತಿಗೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಚುನಾವಣೆಯಲ್ಲಿ ಕುಮಾರಸ್ವಾಮಿ ಗೆಲುವು ಸಾಧಿಸಬೇಕು ಎಂದು ಹರಕೆ ಕಟ್ಟಿಕೊಳ್ಳಲಾಗಿತ್ತು. ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಅಭೂತಪೂರ್ವ ಜಯ ದಾಖಲಿಸಿದ್ದರಿಂದ ಯುವಕರು ಮಂಗಳವಾರ ಸಂಜೆ ತಿರುಪತಿಗೆ ತೆರಳಿ ಬುಧವಾರ ಬೆಳಗ್ಗೆ ತಿರುಪತಿ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಕುಮಾರಸ್ವಾಮಿ ಅವರಿಗೆ ಮೋದಿ ಅವರ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ ಸಿಗಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.

ಸುರೇಶ್‌ಗೌಡ್ರು ಅಭಿಮಾನಿ ಬಳಗದ ಎನ್.ನಂದೀಶ್ ಮಾತನಾಡಿ, ಕುಮಾರಸ್ವಾಮಿ ಅವರು 2 ಬಾರಿ ಮುಖ್ಯಮಂತ್ರಿಯಾಗಿ ಬಹಳಷ್ಟು ಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಇದನ್ನು ಗುರುತಿಸಿ ಜಿಲ್ಲೆಯ ಜನರು ಹೆಚ್ಚಿನ ಮತಗಳ ಅಂತರದಿಂದ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದ್ದಾರೆ. ಮುಂದೆ ಕೇಂದ್ರ ಸಚಿವರಾಗಿ ಮತ್ತಷ್ಟು ಜನಪರ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದರು.
ಅಭಿಮಾನಿ ಬಳಗದ ಎನ್.ಕೆ.ಶ್ರೀನಿವಾಸ್, ಮಂಜೇಶ್, ರವಿಚಂದ್ರ, ಭರತ್, ದರ್ಶನ್, ಸಂತೋಷ್, ರಾಕೇಶ್, ಶಿವಮಾದು, ತಿಮ್ಮೇಶ್ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net