ಪೂಜೆ ಹರಿಶಿಣ ಕುಂಕುಮ ವಿತರಣೆ

ವವಲಕ್ಷ್ಮೀ ಕಿಟ್ ವಿತರಣೆ
ಮಾನ್ವಿ ತಾಲೂಕಿನ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಶಾಸಕ ಹಂಪಯ್ಯನಾಯಕ ಕಿಟ್ ವಿತರಿಸಿದರು. ತಹಸೀಲ್ದಾರ್ ರಾಜು ಪಿರಂಗಿ, ಉಪ ತಹಸೀಲ್ದಾರ್ ವಿರುಪಣ್ಣ ಇದ್ದರು.
Published on

ಮಾನ್ವಿ: ರಾಜ್ಯ ಸರಕಾರದಿಂದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಎಲ್ಲ ದೇವಸ್ಥಾನಗಳಲ್ಲಿ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ವಿಶೇಷ ಪೂಜೆನಡೆಸಿ ಭಕ್ತರಿಗೆ ಪ್ರಸಾದ ರೂಪದಲ್ಲಿ ಹರಿಶಿಣ, ಕುಂಕುಮ, ಬಳೆ ಒಳಗೊಂಡ ಕಿಟ್‌ಗಳನ್ನು ನೀಡಲಾಗುತ್ತಿದೆ ಎಂದು ಶಾಸಕ ಹಂಪಯ್ಯನಾಯಕ ತಿಳಿಸಿದರು.

ತಾಲೂಕಿನ ನೀರಮಾನ್ವಿ ಗ್ರಾಮದ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಮುಜುರಾಯಿ ಇಲಾಖೆಯಿಂದ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಭಕ್ತರಿಗೆ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು.

ವರಮಹಾಲಕ್ಷ್ಮೀ ಮಳೆ, ಬೆಳೆ ನೀಡಿ ಕಾಪಾಡಲಿ ಎಂದು ಪ್ರಾರ್ಥನೆ ಮಾಡಿದರು. ನಂತರ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಅಗತ್ಯವಾದ ಕುಡಿಯುವ ನೀರಿನ ಕೊಳವೆ ಬಾವಿಗೆ ಚಾಲನೆ ನೀಡಿದರು.

ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ರಾಜು ಪಿರಂಗಿ, ಉಪ ತಹಸೀಲ್ದಾರ್ ವಿರುಪಣ್ಣ, ದೇವಸ್ಥಾನದ ಅರ್ಚಕ ಮಲ್ಲಿಕಾರ್ಜುನ ಪೂಜರಿ, ಮುಖಂಡರಾದ ಶರಣಯ್ಯನಾಯಕ ಗುಡದಿನ್ನಿ, ಶ್ರೀರಾಮುಲು, ಗೋಪಾಲನಾಯಕ, ದೇವೆಂದ್ರಪ್ಪ, ರವಿಕುಮಾರ ನುಗಡೋಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net