ಸಂಭ್ರಮದ ವರಮಹಾಲಕ್ಷ್ಮೀ ಪೂಜೆ

mkg1
Published on

ನ್ಯಾಮತಿ: ತಾಲೂಕಿನಾದ್ಯಂತ ಮುತೈದೆಯರು ಮನೆಗಳಲ್ಲಿ ಭಕ್ತಿ, ಸಂಭ್ರಮ, ಸಡಗರದಿಂದ ವರಮಹಾಲಕ್ಷ್ಮೀ ಪೂಜೆಯನ್ನು ಶುಕ್ರವಾರ ಆಚರಿಸಿದರು.
ಮನೆಯ ಅಂಗಳದಲ್ಲಿ ಬಣ್ಣಬಣ್ಣದ ರಂಗೋಲಿಯ ಚಿತ್ತಾರ ಚಿತ್ರಿಸಿ, ಬಾಗಿಲಿಗೆ ಬಾಳೆಕಂದು, ಮಾವಿನ ತೋರಣ ಕಟ್ಟಲಾಗಿತ್ತು.

ಮನೆಯೊಳಗೆ ಪುಟ್ಟ ಮಂಟಪ ನಿರ್ಮಿಸಿ ಅದರೊಳಗೆ ವರಮಹಾಲಕ್ಷ್ಮೀಯನ್ನು ಪ್ರತಿಷ್ಟಾಪಿಸಿ ಬಗೆಬಗೆಯ ಹಣ್ಣು, ಹೂಗಳನ್ನಿರಿಸಿ ವಿಶೇಷ ಅಲಂಕಾರ ಮಾಡಿ ಭಕ್ತಿಯಿಂದ ಪೂಜಿಸಿದರು.

ಬಗೆಬಗೆಯ ಅಡುಗೆ ತಯಾರಿಸಿ ಸಮರ್ಪಿಸಿ ನೆರೆಹೊರೆಯ ಮಹಿಳೆಯರಿಗೆ ಅರಿಷಿನ ಕುಂಕುಮದ ಉಡಿ ನೀಡಿದರು.
.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net