

ಸುಂಟಿಕೊಪ್ಪ: ಗುಡ್ಡಪ್ಪ ರೈ ಬಡಾವಣೆಯಲ್ಲಿ ನೆಲೆ ನಿಂತಿರುವ ಶ್ರೀಹುಲಿ ಮಸಣಿಕಮ್ಮ ದೇವಸ್ಥಾನದ ವಾರ್ಷಿಕೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಮಂಗಳವಾರ ಶ್ರದ್ಧಾ ಭಕ್ತಿಯಿಂದ ನೆರವೇರಿದವು.
ವಾರ್ಷಿಕೋತ್ಸವ ಅಂಗವಾಗಿ ದೇವಾಲಯವನ್ನು ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿತ್ತು.
ಬೆಳಗ್ಗೆ 7ರಿಂದ 9 ಗಂಟೆವರೆಗೆ ವಿಶೇಷ ಪೂಜಾ ಕೈಂಕರ್ಯ, 9.30 ರಿಂದ 10ಗಂಟೆವರೆಗೆ ದೇವರ ದರ್ಶನ, ಮಧ್ಯಾಹ್ನ 1ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಿಸಲಾಯಿತು. ಸುಂಟಿಕೊಪ್ಪ ಹಾಗೂ ಸುತ್ತ ಮುತ್ತಲ ಗ್ರಾಮಗಳಿಂದ ಭಕ್ತರು ಆಗಮಿಸಿ ದರ್ಶನ ಪಡೆದರು.
ದೇವಾಲಯ ಸಮಿತಿಯ ಅಧ್ಯಕ್ಷ ಎಚ್.ಆರ್. ಅರುಣ್ ಕುಮಾರ್, ಉಪಾಧ್ಯಕ್ಷ ಉಮೇಶ್, ಪ್ರಧಾನ ಕಾರ್ಯದರ್ಶಿ ಸೂರ್ಯ, ಖಜಾಂಚಿ ಜಿನ್ನಪ್ಪ, ಪಿ. ಸತೀಶ್, ರಾಜು ಕುಟ್ಟ, ವಿಘ್ನೇಶ್, ಕಿರಣ್, ಮಣಿ, ಮನೋಜ್ ಇತರರು ಇದ್ದರು.
.