ಕಾನರ್ಪ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ಪೂಜೆ

Bel_Kanarpa
Published on

ಬೆಳ್ತಂಗಡಿ: ಕಾನರ್ಪ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ 49ನೇ ವರ್ಷದ ಮಕರ ಸಂಕ್ರಮಣದ ಶ್ರೀ ರಾಮಾಂಜನೇಯ ದೇವರ ಪೂಜೆ, ಸತ್ಯನಾರಾಯಣ ಪೂಜೆ ಹಾಗೂ ಸಂಜೀವ ಮಾಸ್ಟರ್ ಕುರುಡ್ಯ ಸಂಸ್ಮರಣೆಯಲ್ಲಿ ಭಜನಾ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ನಡೆಯಿತು.

ಭಜನಾ ಕಾರ್ಯಕ್ರಮವನ್ನು ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ವರ್ಮ ಉದ್ಘಾಟಿಸಿದರು. ವಿಕ್ರಮ ಹೊಳ್ಳ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ಉಜಿರೆ ಎಸ್.ಡಿ.ಎಂ. ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಅಕ್ಷತಾ ಕೆ. ಧಾರ್ಮಿಕ ಪ್ರವಚನ ನೀಡಿದರು.

ವಾಣಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ, ಚಿರಂಜೀವಿ ಯುವಕ ಮಂಡಲ ಸ್ಥಾಪಕಾಧ್ಯಕ್ಷ ಗೋಪಾಲಕೃಷ್ಣ ಮಾಸ್ತರ್, ದಿವ್ಯಾ ರಾಮಚಂದ್ರ ಭಟ್ ಅರೆಕ್ಕಲ್, ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಬಂಗಾಡಿ ಸಿ.ಎ.ಬ್ಯಾಂಕ್ ಅಧ್ಯಕ್ಷ ಹರೀಶ್ ಕುಮಾರ್ ನಾವೂರು, ಉಪಾಧ್ಯಕ್ಷ ಆನಂದ ಗೌಡ ಬರೆಮೇಲು, ಉಜಿರೆ ರಬ್ಬರ್ ಸೊಸೈಟಿಯ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ವಾಣಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಗಣೇಶ್ ಗೌಡ, ಶಾರದಾನಗರ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಉದ್ಯಮಿ ನಾಗೇಶ್ ಗೌಡ ಕೊಕ್ಕಡ, ನಾರಾಯಣ ಗೌಡ ಮುಂಡಾಜೆ, ರಾಮಣ್ಣ ಶೆಟ್ಟಿ ಅಗರಿ, ಲೋಕೇಶ್ವರಿ ವಿನಯಚಂದ್ರ ಗೌಡ, ಬಾಬು ಪೂಜಾರಿ ಕೂಳೂರು, ಚೆನ್ನಕೇಶವ ನಾಯ್ಕ ಮುಂಡಾಜೆ, ಅರಣ್ಯ ಉಪವಲಯಾಧಿಕಾರಿ ಹರಿಪ್ರಸಾದ್ ಕಾನರ್ಪ, ಕಲಾವಿದ ಜಯರಾಮ್ ಕಲಾಕುಂಚ ಮುಂಡಾಜೆ, ಭಕ್ತರು ಉಪಸ್ಥಿತರಿದ್ದರು.

ಶ್ರೀ ರಾಮಾಂಜನೇಯ ದೇವಸ್ಥಾನದ ಆಡಳಿತ ಮೊಕ್ತೇಸರ ಕಿಶೋರ್ ಕುಮಾರ್ ಸ್ವಾಗತಿಸಿದರು. ನಾರಾಯಣ ಪೂಜಾರಿ ದೂಂಬೆಟ್ಟು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net