

ಕಡಬ: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ಹೊಸ ಅಕ್ಕಿ ನೈವೇದ್ಯ ಸಮರ್ಪಣೆ ಹಾಗೂ ನೂಜಿ ಪುದ್ವಾರ್- ತುಳುನಾಡ ಪುದ್ವಾರ್ ಕಾರ್ಯಕ್ರಮ ನಡೆಯಿತು.
ನವರಾತ್ರಿಯ ವಿಜಯ ದಶಮಿ ದಿನ ಬೆಳಗ್ಗೆ ಅಕ್ಷರಾಭ್ಯಾಸ ಕಾರ್ಯಕ್ರಮ, ಮಧ್ಯಾಹ್ನ ಹೊಸ ಅಕ್ಕಿ ನೈವೇದ್ಯ ಸಮರ್ಪಣೆ ಜರುಗಿತು. ಮಹಾಪೂಜೆ, ಪುದ್ವಾರ್ ಕಾರ್ಯಕ್ರಮ, ನವಾನ್ನಪ್ರಾಶನ ಕಾರ್ಯಕ್ರಮ ನಡೆಯಿತು. ಶುಕ್ರವಾರ ಕ್ಷೇತ್ರದಲ್ಲಿ ಸಾಮೂಹಿಕ ಆಯುಧ ಪೂಜೆ, ವಾಹನ ಪೂಜೆ ಕಾರ್ಯಕ್ರಮ ನಡೆಯಿತು. ನವರಾತ್ರಿಯ ಒಂಬತ್ತು ದಿನ ರಾತ್ರಿ ಕ್ಷೇತ್ರದಲ್ಲಿ ವಿಶೇಷ ಪೂಜೆ ಜರುಗಿತು. ಕ್ಷೇತ್ರದ ಸಮಿತಿಯವರು, ಭಕ್ತರು ಭಾಗವಹಿಸಿದ್ದರು.