ವಿದ್ಯಾನಿಧಿಯ ನವಿತಾ, ಶ್ರೀಲಕ್ಷ್ಮಿ ರಾಜ್ಯಕ್ಕೆ ದ್ವೀತಿಯ ಟಾಪರ್​

PU_ReValuation
Published on

ದ್ವಿತೀಯ ಪಿಯು ಮರುಮೌಲ್ಯಮಾಪನ

ತುಮಕೂರು: ದ್ವಿತೀಯ ಪಿಯುಸಿ ಮರುಮೌಲ್ಯಮಾಪನದ ಫಲಿತಾಂಶ ಪ್ರಕಟಗೊಂಡಿದ್ದು ವಿದ್ಯಾನಿಧಿ ಕಾಲೇಜಿನ ವಾಣಿಜ್ಯ ವಿಭಾಗದ ಎಂ.ಸಿ.ನವಿತಾ ಹಾಗೂ ಶ್ರೀಲಕ್ಷ್ಮೀ 598 ಅಂಕಗಳನ್ನು ಪಡೆಯುವುದರೊಂದಿಗೆ ರಾಜ್ಯಕ್ಕೆ ದ್ವಿತೀಯ ಟಾಪರ್​ ಆಗಿ ಹೊರಹೊಮ್ಮಿದ್ದಾರೆ.

ಪಿ.ಜಾಹ್ನವಿ 596 ಅಂಕಗಳೊಂದಿಗೆ 4 ನೇ , ಆರ್​.ಗಾಯತ್ರಿ 594 ಅಂಕಗಳೊಂದಿಗೆ 6ನೇ , ಕಶಿಶ್​ ಎ.ಜೈನ್​ 592 ಅಂಕಗಳೊಂದಿಗೆ 8 ನೇ ಸ್ಥಾನ, ಗುಣಸಾಗರಿ 591 ಅಂಕಗಳೊಂದಿಗೆ 9 ನೇ ಸ್ಥಾನ ಪಡೆದಿದ್ದಾರೆ. ಪ್ರೇರಣಾ ಜೈನ್​ ಅರ್ಥಶಾಸ್ತ್ರದಲ್ಲಿ 10 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದು 586 ಅಂಕಗಳನ್ನು ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಸಿರಿ ಕೊಂಡ ಇಂಗ್ಲೀಷ್​ನಲ್ಲಿ 4 ಅಂಕಗಳು ಮತ್ತು ರಸಾಯನಶಾಸ್ತ್ರದಲ್ಲಿ ಒಂದು ಅಂಕ ಹೆಚ್ಚುವರಿ ಪಡೆದು ಒಟ್ಟು 592 ಅಂಕಗಳನ್ನು ಪಡೆದು ರಾಜ್ಯಕ್ಕೆ 8 ನೇ ಟಾಪರ್​ ಎನಿಸಿದ್ದಾರೆ. ಈ ವರ್ಷದ ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟ ಸಮಯದಲ್ಲಿ ವಾಣಿಜ್ಯ ವಿಭಾಗದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಟಾಪ್​ 10ರಲ್ಲಿ ಬರುವ ನಿರೀಕ್ಷೆಯಿತ್ತು. ಅದು ಹುಸಿಯಾಗಲಿಲ್ಲವಾದರೂ ನಿರೀಕ್ಷಿತ ಅಂಕಗಳು ಬರದಿದ್ದಾಗ ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು. ಕನ್ನಡ, ಇಂಗ್ಲಿಷ್​ ಮತ್ತು ಅರ್ಥಶಾಸ್ತ್ರ ವಿಷಯಗಳಲ್ಲಿ ವಿದ್ಯಾರ್ಥಿಗಳ ಅಂಕಗಳು ಹೆಚ್ಚಿವೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್​ ತಿಳಿಸಿದರು.

ಫಲಿತಾಂಶ ಪ್ರಕಟವಾದಾಗ ಸಹಜವಾಗಿ ನಮ್ಮ ನಿರೀಕ್ಷೆಗೆ ತಕ್ಕಂತೆ ಅಂಕಗಳು ಬಂದಿರಲಿಲ್ಲ. ಹಾಗಾಗಿ, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು ಅರ್ಹವಾಗಿ ಬರಬೇಕಿದ್ದ ಅಂಕಗಳು ಬಂದಿವೆ. ಪರಿಶ್ರಮ, ನಮ್ಮನ್ನು ಈ ಹಂತಕ್ಕೆ ತರುವಲ್ಲಿ ನಮ್ಮ ಉಪನ್ಯಾಸಕವೃಂದದವರು ನೀಡಿದ ಬೆಂಬಲ ಎಲ್ಲದಕ್ಕೂ ಮೌಲ್ಯ ಒದಗಿದಂತಾಯಿತು. ಎಂ.ಸಿ.ನವಿತಾ ದ್ವಿತೀಯ ಟಾಪರ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net