ಸ್ಚಚ್ಛತಾ ಕಾರ್ಯಗಳಿಗೆ ಸಾರ್ವಜನಿಕರ ಬೆಂಬಲ: ಡಾ.ಟಿ.ಎನ್.ಸೀಮಾ ಕೋರಿಕೆ

Ksd_Public support
Published on

ಕಾಸರಗೋಡು: ಸ್ವಚ್ಛತಾ ಕಾರ್ಯದಲ್ಲಿ ಉತ್ತಮ ಹಾಗೂ ಕ್ರಿಯಾಶೀಲತೆಯೊಂದಿಗಿನ ಯೋಜನೆಗಳಿಂದ ಕಾಞಂಗಾಡಿನ ಮುಖಛಾಯೆ ಬದಲಾಗುತ್ತಿದ್ದು, ಇದಕ್ಕೆ ಸಾರ್ವಜನಿಕರ ಬೆಂಬಲವೂ ಅನಿವಾರ್ಯ ಎಂದು ನವಕೇರಳ ಮಿಷನ್ ರಾಜ್ಯ ಸಂಯೋಜಕಿ ಡಾ.ಟಿ.ಎನ್.ಸೀಮಾ ಹೇಳಿದರು.

ಕೇರಳದ ಹೊಸ ಕ್ರಿಯಾ ಯೋಜನೆಯ ಭಾಗವಾಗಿ, ಜಲಮೂಲಗಳ ಸ್ವಚ್ಛತೆಯ ’ಇನ್ನು ನಾನು ಮುಂದಕ್ಕೆ ಹರಿಯಲೇ’ ಯೋಜನೆಯ ಮೂರನೇ ಹಂತದ ಅಭಿಯಾನದ ಅತಿಯಾಂಬೂರ್-ಕಾಲಿಕಡವು ತೋಡಿನ ಸ್ವಚ್ಛತೆ ಉದ್ಘಾಟಿಸಿ ಮಾತನಾಡಿದರು.

ನಗರಸಭಾ ವ್ಯಾಪ್ತಿಯ ಕಾಲುವೆಗಳ ಪುನರುಜ್ಜೀವನಕ್ಕೂ ಚಾಲನೆ ನೀಡಿದರು. ನೀರು ಹರಿಯುವ ನಾಲೆಗಳನ್ನು ತ್ಯಾಜ್ಯರಹಿತವಾಗಿಸಲು ಕಸಮುಕ್ತ ನವಕೇರಳಂ ವಾರ್ಡ್‌ಮಟ್ಟದ ‘ಜನಕೀಯ ಸಮಿತಿ’ ವತಿಯಿಂದ ಸ್ವಚ್ಛತಾ ಕಾರ್ಯ ಆರಂಭಿಸಲಾಯಿತು. ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ನವಕೇರಳ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣ ಯೋಜನೆ ಬಗ್ಗೆ ಮಾಹಿತಿ ನೀಡಿದರು. ನಗರಸಭಾ ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಲತಾ ಮತ್ತು ಕೆ.ವಿ.ಪ್ರಭಾವತಿ ಉಪಸ್ಥಿತರಿದ್ದರು. ವಾರ್ಡ್ ಕೌನ್ಸಿಲರ್ ಟಿ.ವಿ.ಸುಜಿತ್ ಕುಮಾರ್ ಸ್ವಾಗತಿಸಿದರು. ಕೌನ್ಸಿಲರ್ ಫೌಜಿಯಾ ಷರೀಫ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net