ಸ್ವಚ್ಛತಾ ಕಾರ್ಯಕ್ಕೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ

ಫೋಟೋ ಶೀರ್ಷಿಕೆ 28 ಸಿಆರ್_ಪಿ-2ಎ.
ಚನ್ನರಾಯಪಟ್ಟಣದ ನ್ಯಾಯಾಲಯಗಳ ಸಂಕೀರ್ಣ ಆವರಣದಲ್ಲಿ ತಾಲೂಕು ಕಾನೂನು ಸಮಿತಿ ವಕೀಲರ ಸಂಘ ಹಾಗೂ ಪುರಸಭೆ ವತಿಯಿಂದ ಸ್ವಚ್ಛತಾ ಸೇವೆ ಆಂದೋಲನಕ್ಕೆ ನ್ಯಾಯಾಧೀಶೆ ಮಮತಾ.ಪಿ. ಚಾಲನೆ ನೀಡಿದರು ವಾಸು.ಡಿ.ಎ, ರಾಘವೇಂದ್ರ.ಸಿ.ಎನ್, ಶಿವಪ್ರಸಾದ್, ಬಿ.ಸಿ. ಮುರಳೀಧರ್ ಇತರರಿದ್ದರು.
Published on

ಚನ್ನರಾಯಪಟ್ಟಣ: ಸ್ವಚ್ಛತೆ ಕೇವಲ ಪುರಸಭೆಯ ಕೆಲಸವಲ್ಲ. ಅದರಲ್ಲಿ, ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ. ಸ್ವಚ್ಛತಾ ಕಾರ್ಯಕ್ಕೆ ಪ್ರತಿಯೊಬ್ಬರು ಕೈಜೋಡಿಸಿದಾಗ ಮಾತ್ರ ಆರೋಗ್ಯ ಹಾಗೂ ಸುಂದರವಾದ ಸಮಾಜ ನಿರ್ಮಾಣ ಸಾಧ್ಯ ಎಂದು ಎರಡನೇ ಅಧಿಕ ಸಿವಿಲ್ ನ್ಯಾಯಾಧೀಶೆ ಪಿ. ಮಮತಾ ತಿಳಿಸಿದರು.

ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದ ಆವರಣದಲ್ಲಿ ತಾಲೂಕು ಕಾನೂನು ಸಮಿತಿ, ವಕೀಲರ ಸಂಘ ಹಾಗೂ ಪುರಸಭೆ ವತಿಯಿಂದ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಸ್ವಚ್ಛತೆಯೇ ಸೇವೆ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸ್ವಚ್ಛತಾ ಕಾರ್ಯಕ್ರಮ ಒಂದು ಅವಧಿಗೆ ಸೀಮಿತವಾಗಿರದೇ ನಿರಂತರ ಅಭಿಯಾನವಾದಾಗ ಸ್ವಚ್ಛ ನಗರವಾಗಲು ಸಾಧ್ಯ. ಪರಿಸರ ಸ್ವಚ್ಛತೆಯಿಂದ ಮನುಷ್ಯನ ಆರೋಗ್ಯ ಉತ್ತಮವಾಗುತ್ತದೆ. ಹಾಗಾಗಿ, ಎಲ್ಲರೂ ತಮ್ಮ ಸುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡಲು ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.

ಪುರಸಭೆಯ ಆರೋಗ್ಯ ಅಧಿಕಾರಿ ರಾಜು ಮಾತನಾಡಿ, ತಾಲೂಕಿನಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಸ್ವಚ್ಛತಾ ಹಿ ಸೇವಾ/ಸ್ವಚ್ಛತೆಯೇ ಸೇವೆ ಆಂದೋಲನ 2023ರ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 2 ರವರೆಗೆ ವಿಶೇಷ ಆಂದೋಲನ ಅಂಗವಾಗಿ .ಅ. 1 ರಂದು ಏಕಕಾಲದಲ್ಲಿ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ‘ಏಕ್ ತಾರೀಖ್ ಏಕ್ ಗಂಟ’ ಕಾರ್ಯಕ್ರಮವನ್ನು ಹೆಚ್ಚು ಜನಜಂಗುಳಿ ಇರುವ ಸ್ಥಳಗಳಾದ ಬಸ್ ನಿಲ್ದಾಣ, ಸಮುದಾಯ ಭವನ, ಪ್ರವಾಸಿ ತಾಣಗಳು, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ವಾಸು.ಡಿ.ಎ ಮಾತನಾಡಿದರು ಕಾರ್ಯದರ್ಶಿ ರಾಘವೇಂದ್ರ.ಸಿ.ಎನ್, ಖಜಾಂಚಿ ಶಿವಪ್ರಸಾದ್, ವಕೀಲರಾದ ಬಿ.ಸಿ. ಮುರುಳಿಧರ್ ಬಿ.ವಿ.ವಿಜಯ, ರಾಜು, ಭಗವಾನ್ ಹಾಗೂ ಪುರಸಭೆಯ ನೌಕರರು, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net