ಅಪಾಯಕಾರಿ ಮರ ತೆರವಿಗೆ ಸಾರ್ವಜನಿಕರ ಆಗ್ರಹ

bmr
Published on

ಬ್ರಹ್ಮಾವರ: ಬ್ರಹ್ಮಾವರ ಹಂದಾಡಿ ಬೇಳೂರು ಜೆಡ್ಡು ಕಾಲನಿ ಸಂಪರ್ಕಿಸುವ ರಸ್ತೆಯಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಜಾಗದಲ್ಲಿರುವ ಅಕೇಶಿಯಾ ಮರವೊಂದು ರಸ್ತೆಗೆ ವಾಲಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಈ ರಸ್ತೆಯಲ್ಲಿ ಪ್ರತಿ ದಿನ ನೂರಾರು ಮಂದಿ ಹಾಗೂ ಶಾಲಾ ವಾಹನಗಳ ಸಂಚಾರ ಇದ್ದು, ಗಾಳಿ ಮಳೆಗೆ ಮರ ಬಿದ್ದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಈ ಬಗ್ಗೆ ಸಂಬಂಧಪಟ್ಟವರು ಕ್ರಮಕೈಗೊಂಡು ಅಪಾಯಕಾರಿ ಮರವನ್ನು ತೆರವು ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66 ಬ್ಯಾಂಕರ್ಸ್‌ ಕಾಲನಿ ಮೂಲಕ ಹಂದಾಡಿಯಿಂದ ಬಾರಕೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಮರ ಖಾಸಗಿ ಜಾಗದಲ್ಲಿದ್ದು, ರಸ್ತೆ ಕಡೆಗೆ ವಾಲಿದೆ. ಇದನ್ನು ತೆರವು ಮಾಡುವಂತೆ ಅನೇಕ ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಅಪಾಯ ಸಂಭವಿಸುವ ಮುನ್ನ ಮರ ತೆರವುಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ರಸ್ತೆಯಲ್ಲಿ ಯಾವಾಗಲೂ ಜನ, ವಾಹನ ಸಂಚಾರ ಇರುತ್ತದೆ. ಶಾಲಾ ವಿದ್ಯಾರ್ಥಿಗಳು ಓಡಾಡುತ್ತಾರೆ. ರಸ್ತೆ ಬದಿಯಲ್ಲಿ ವಾಲಿಕೊಂಡಿರುವ ಅಪಾಯಕಾರಿ ಮರ ಕಡಿಯುವಂತೆ ಮನೆಯವರಲ್ಲಿ ಮತ್ತು ಸ್ಥಳೀಯ ಹಂದಾಡಿ ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆಗೆ ಮನವಿ ನೀಡಿದ್ದೇನೆ. ಆದರೆ ಈ ತನಕ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ವಿಜಯಲಕ್ಷ್ಮೀ, ಸಾವಾಜಿಕ ಕಾರ್ಯಕರ್ತೆ, ಕುಮ್ರಗೋಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net