ಸಾರ್ವಜನಿಕರ ಸಹಕಾರ ಅಗತ್ಯ

ಸಾರ್ವಜನಿಕರ ಸಹಕಾರ ಅಗತ್ಯ
ಗಂಗಾವತಿ ತಾಲೂಕಿನ ಕೇಸರಹಟ್ಟಿ ಗ್ರಾಪಂ ಕಚೇರಿಯಲ್ಲಿ ಗೃಹಲಕ್ಷ್ಮೀ ಯೋಜನೆ ಸ್ವೀಕೃತ ಪ್ರಮಾಣ ಪತ್ರಗಳನ್ನು ಲಾನುಭವಿಗಳಿಗೆ ತಾಪಂ ಇಒ ಮಹಾಂತಗೌಡ ಪಾಟೀಲ್ ಸೋಮವಾರ ವಿತರಿಸಿದರು. ವಿಎಸ್ಸೆಸ್ಸೆನ್ ಸದಸ್ಯ ವಿಶ್ವನಾಥ ಮಾಲಿ ಪಾಟೀಲ್, ಪಿಡಿಒ ಎಚ್.ಕೃಷ್ಣ ಇತರರಿದ್ದರು.
Published on

ಗಂಗಾವತಿ: ಗ್ರಾಪಂ ಕಚೇರಿ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಲಾಗಿದ್ದು, ದಾಖಲೆಗಳನ್ನು ಸಲ್ಲಿಸಿ ನೋಂದಾಯಿಸಿಕೊಳ್ಳುವಂತೆ ತಾಪಂ ಇಒ ಮಹಾಂತಗೌಡ ಪಾಟೀಲ್ ತಿಳಿಸಿದರು.

ತಾಲೂಕಿನ ಕೇಸರಹಟ್ಟಿ ಗ್ರಾಪಂ ಕಚೇರಿಯಲ್ಲಿ ಗೃಹಲಕ್ಷ್ಮೀ ಯೋಜನೆ ಸ್ವೀಕೃತ ಪ್ರಮಾಣ ಪತ್ರಗಳನ್ನು ಸೋಮವಾರ ವಿತರಿಸಿ ಮಾತನಾಡಿದರು. ಮಹಿಳೆಯರು ಅಗತ್ಯ ದಾಖಲೆ ಸಲ್ಲಿಸುವ ಮೂಲಕ ಹೆಸರು ನೋಂದಾಯಿಸಿಕೊಳ್ಳಿ.

ಗ್ರಾಪಂ ಸಿಬ್ಬಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಗ್ರಾಮೀಣ ಭಾಗದ ಬಾಪೂಜಿ ಸೇವಾ ಕೇಂದ್ರದಲ್ಲಿ ಈಗಾಗಲೇ ಶುರುವಾಗಿದ್ದು, ಯೋಜನೆ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಗ್ರಾಪಂ ಉಪಾಧ್ಯಕ್ಷೆ ವಿರುಪಮ್ಮ ವೀರೇಶ, ಸದಸ್ಯ ನಿರುಪಾದಿಗೌಡ, ಪಿಡಿಒ ಎಚ್.ಕೃಷ್ಣ, ವಿಎಸ್ಸೆಸ್ಸೆನ್ ಸದಸ್ಯ ವಿಶ್ವನಾಥ ಮಾಲಿ ಪಾಟೀಲ್, ತಾಂತ್ರಿಕ ಸಂಯೋಜಕ ಬಸವರಾಜ ಜಟಗಿ, ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ ಇತರರಿದ್ದರು.

ನೂಕುನುಗ್ಗಲು…. ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮಹಿಳೆಯರು ಮುಗಿಬಿದ್ದಿದ್ದರಿಂದ ನೂಕುನುಗ್ಗಲಾಗುತ್ತಿದೆ. ಬ್ಯಾಂಕ್ ಖಾತೆಯಿಲ್ಲದ ಮಹಿಳೆಯರಿಗೆ ಎಸ್‌ಬಿಐ ಸೇರಿ ಕೆಲ ರಾಷ್ಟ್ರೀಕೃತ ಬ್ಯಾಂಕ್‌ಗಳು ಖಾತೆ ತೆರೆಯಲು ಸಹಕರಿಸುತ್ತಿಲ್ಲ. ಸರ್ವರ್ ಸಮಸ್ಯೆ ಗಂಟೆಗಟ್ಟಲೆ ಕಾಯುವಂತೆ ಮಾಡುತ್ತಿದ್ದು, ಗ್ರಾಮ ಒನ್ ಸಿಬ್ಬಂದಿ ಸೌಜನ್ಯದಿಂದ ವರ್ತಿಸುತ್ತಿಲ್ಲ. ಇಂಟರ್‌ನೆಟ್ ಮತ್ತು ಜೆರಾಕ್ಸ್ ಕೇಂದ್ರಗಳು ುಲ್ ಆಗಿದ್ದು, ಅನಿಯಮಿತ ಲೋಡ್‌ಶೆಡ್ಡಿಂಗ್‌ನಿಂದ ದುಬಾರಿ ಶುಲ್ಕ ನೀಡಿ ಜೆರಾಕ್ಸ್ ಪ್ರತಿಗಳನ್ನು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಲಾನುಭವಿಗಳು ಅಳಲು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net