More

    ಡಿವಿಜಿ ಅವರ ಮನೆ ಜೀರ್ಣೋದ್ಧಾರಕ್ಕೆ ಜಿಲ್ಲಾಡಳಿತ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ

    ಕೋಲಾರ: ಮುಳಬಾಗಲಿನಲ್ಲಿ ಪ್ರಸ್ತುತ ಸರ್ಕಾರಿ ಶಾಲೆಯಾಗಿರುವ ಡಿವಿಜಿ ಅವರ ಮನೆ ಜೀರ್ಣೋದ್ಧಾರ ಹಾಗೂ ಪ್ರತಿಮೆ ಸ್ಥಾಪಿಸುವ ಉದ್ದೇಶವಿದ್ದು, ಜಿಲ್ಲಾಡಳಿತ ಹಾಗೂ ಸಾರ್ವಜನಿಕರ ಸಹಕಾರ ಅವಶ್ಯಕ ಎಂದು ಕಸಾಪ ಮಾಜಿ ಜಿಲ್ಲಾಧ್ಯಕ್ಷ ಕೆ.ಪ್ರಹ್ಲಾದರಾವ್ ಹೇಳಿದರು.

    ಜಿಲ್ಲಾ ಕಸಾಪ ವತಿಯಿಂದ ಪರಿಷತ್‌ನ ಕಚೇರಿ ಸಭಾಂಗಣದಲ್ಲಿ 10 ಮತ್ತು 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ದತ್ತಿ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಸಾಹಿತಿ ಡಿವಿಜಿ ಬಗ್ಗೆ ಉಪನ್ಯಾಸ ಹಾಗೂ ಯುವ ಕವಿಗೋಷ್ಠಿಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ಮುಳಬಾಗಲಿನಲ್ಲಿ ಡಿವಿಜಿ ಅವರ ಪ್ರತಿಮೆ ಸ್ಥಾಪನೆಗೆ ಸರ್ಕಾರದ ಅನುಮತಿ ಬೇಕು. ಹಾಲಿ ಶಾಲೆಯಾಗಿರುವ ಮನೆಯನ್ನು ಉಳಿಸಿ ಬೆಳೆಸುವ ಉದ್ದೇಶ ಇದೆ ಎಂದು ತಿಳಿಸಿದರು.

    ಜಿಲ್ಲೆಯ ಗಡಿ ಭಾಗದಲ್ಲಿ ಹೆಚ್ಚು ಹೆಚ್ಚು ಕನ್ನಡದ ಪ್ರಚಾರ ಕಾರ್ಯಕ್ರಮ ನಡೆಸುವ ಬದಲು ಜನರ ಮನಸ್ಸಿಗೆ ನಾಟುವ ಕಾರ್ಯಕ್ರಮ ರೂಪಿಸಿ ಕನ್ನಡ ವಾತಾವರಣ ಮೂಡಿಸಬೇಕು. ದತ್ತಿ ಉಪನ್ಯಾಸ ಕಾರ್ಯಕ್ರಮಗಳನ್ನು ಪಂಚಾಯಿತಿ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ನುಡಿದರು.

    ಡಿವಿಜಿ ಅವರ ಬರಹಗಳಲ್ಲಿ ವೈಜ್ಞಾನಿಕ ಚಿಂತನೆ ವಿಷಯದ ಬಗ್ಗೆ ಉಪನ್ಯಾಸ ನೀಡಿದ ವಿಜ್ಞಾನ ಲೇಖಕ ಪುರುಷೋತ್ತಮ್ ರಾವ್, ಡಿವಿಜಿ ಅವರಲ್ಲಿ ವೈಜ್ಞಾನಿಕ ಚಿಂತನೆ ಇತ್ತು. ಸಾಹಿತ್ಯ, ವಿಜ್ಞಾನ ಅಂತರ್ ಸಂಬಂಧಿ, ಸಾಹಿತ್ಯದಲ್ಲೂ ಆಲೋಚನಾ ಕ್ರಮ ತರಬೇಕು. ಕವಿ ಮತ್ತು ವಿಜ್ಞಾನಿ ಯಮಳರು ಎಂಬುದನ್ನು ಡಿವಿಜಿ ಉಲ್ಲೇಖಿಸಿದ್ದಾಗಿ ಹೇಳಿದರು.

    ಪರಿಸರವನ್ನು ಸೂಕ್ಷ್ಮ ಕಣ್ಣುಗಳಿಂದ ನೋಡದಿದ್ದರೆ ಅರ್ಥ ಆಗಲ್ಲ. ಅವುಗಳ ಆಳಕ್ಕೆ ಇಳಿದರಷ್ಟೇ ತನ್ನ ಗುಟ್ಟು ಬಿಟ್ಟುಕೊಡುತ್ತದೆ. ಪ್ರಕೃತಿಯನ್ನು ಹೊರಗಿಟ್ಟು ನೋಡಬಾರದು, ಸೃಷ್ಠಿಯಲ್ಲಿ ಯಾವುದೂ ವ್ಯರ್ಥ ಇಲ್ಲ. ಇಂದ್ರೀಯಗಳನ್ನು ಅರ್ಥ ಮಾಡಿಕೊಂಡರೇ ಅದೇ ವಿಜ್ಞಾನ. ವಿಜ್ಞಾನದಿಂದ ಜೀವನ ಹಸನಾಗಬೇಕು, ನಮ್ಮ ನಡವಳಿಕೆಗಳು ವಿಜ್ಞಾನಮಯ ಆಗಬೇಕೆಂದು ಡಿವಿಜಿ ಹೇಳುತ್ತಿದ್ದರು ಎಂದರು.

    ಆಶಯ ನುಡಿಗಳನ್ನಾಡಿದ ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್, ಡಿವಿಜಿ ಅವರಂತಹ ಹಿರಿಯ ಸಾಹಿತಿಯ ಬಗ್ಗೆ ಸಾಹಿತ್ಯದಲ್ಲಿ ವೈಜ್ಞಾನಿಕ ವಿಚಾರ ತಿಳಿಸುವ ಹೊಸ ಪ್ರಯತ್ನ ಮಾಡಲಾಗುತ್ತಿದೆ. ಸಮಾಜದ ಮುಂದೆ ಬಾಳಿ ಬದುಕುವ ಉತ್ಸಾಹದಲ್ಲಿರುವ ಯುವಕರನ್ನು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಯುವಕರಿಗೆ ಕವಿಗೋಷ್ಠಿ ಆಯೋಜಿಸಿ ಅವರ ಬದುಕಿನಲ್ಲೂ ಸುವಾಸನೆಯ ಹೂವು ಅರಳಿಸುವ ಕೆಲಸ ಮಾಡೋಣ. ಯುವಕರಿಂದ ಹೊರಬರುವ ಸಾಹಿತ್ಯ ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿದೀಪವಾಗಲಿ ಎಂದು ಆಶಿಸಿದರು.

    ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ಎಸ್.ರಾಮಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ನಾ.ವೆಂಕಟರವಣ ವಹಿಸಿದ್ದರು.

    ಕಸಾಪ ಗೌರವ ಸಲಹೆಗಾರ ಡಾ.ಕೆ ಎಂ.ಜೆ ಮೌನಿ, ಅಂಚೆ ನೌಕರರ ಸಾಹಿತ್ಯ ಬಳಗದ ಕೋಲಾರ ಜಿಲ್ಲಾಧ್ಯಕ್ಷ ಪೋಸ್ಟ್ ನಾರಾಯಣಸ್ವಾಮಿ, ಸುಗಟೂರು ಹೋಬಳಿ ಕಸಾಪ ಗೌರವಾಧ್ಯಕ್ಷ ಜಿ.ಆರ್.ಶಂಕರೇಗೌಡ, ಸಮಾಜ ಸೇವಕ ಬಿ.ಆರ್.ಶ್ರೀನಿವಾಸಮೂರ್ತಿ, ಕಸಾಪ ಪದಾಧಿಕಾರಿ ವೆಂಕಟಸ್ವಾಮಿ, ಮಾಗೇರಿ ನಾರಾಯಣಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts