

ಕಾರ್ಕಳ: ಕ್ರೈಸ್ಟ್ಕಿಂಗ್ ಪದವಿ ಪೂರ್ವ ಕಾಲೇಜು, ರೋವರ್ಸ್ ಮತ್ತು ರೇಂಜರ್ಸ್ ಟಕ, ಸ್ಕೌಟ್ ಮತ್ತು ಗೈಡ್ಸ್ ಟಕ ವತಿಯಿಂದ ಕಾರ್ಕಳ ನಗರ ಪೊಲೀಸ್ ಠಾಣೆ ನೇತೃತ್ವದಲ್ಲಿ ವಿಶ್ವ ವಾದಕ ದ್ರವ್ಯ ವಿರೋಧಿ ದಿನ ಅಂಗವಾಗಿ ಜನ ಜಾಗೃತಿ ಮೂಡಿಸಲು ವಾದಕ ದ್ರವ್ಯ ವಿರೋಧಿ ಜಾಥಾ ಜರುಗಿತು.
ಕ್ರೈಸ್ಟ್ಕಿಂಗ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು, ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಪ್ರೌಢಶಾಲಾ ವಿಭಾಗದ ಸ್ಕೌಟ್ ಮತ್ತು ಗೈಡ್ಸ್ ಟಕಗಳ ವಿದ್ಯಾರ್ಥಿಗಳು ಕಾರ್ಕಳದ ಬಂಡಿಮಠ ಬಸ್ ನಿಲ್ದಾಣದಿಂದ ಗಾಂಧಿಮೈದಾನವರೆಗೆ ವಾದಕ ದ್ರವ್ಯ ವಿರೋಧಿ ೋಷಣೆ ಕೂಗುತ್ತಾ ಸಾಗಿದರು.
ಕಾರ್ಕಳ ನಗರ ಠಾಣಾ ಪೊಲೀಸ್ ಉಪ ನಿರೀಕ್ಷಕ ಶಿವಕುವಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಡ್ರಗ್ಸ್ ಹಾಗೂ ಇತರ ವಾದಕ ದ್ರವ್ಯಗಳ ಅಪಾಯಗಳು ಹಾಗೂ ಅವುಗಳ ಬಗ್ಗೆ ವಹಿಸಬೇಕಾದ ಎಚ್ಚರಿಕೆಗಳ ಕುರಿತು ಮಾಹಿತಿ ಹಾಗೂ ವಾದಕ ದ್ರವ್ಯ ಸೇವನೆ ಮತ್ತು ವಾರಾಟ ವಾಹಿತಿ ಸಿಕ್ಕಲ್ಲಿ ಪೊಲೀಸ್ ಠಾಣೆಗೆ ವಾಹಿತಿ ನೀಡುವಂತೆ ಹೇಳಿದರು.
ಕಾರ್ಕಳ ನಗರ ಠಾಣೆ ನೂತನ ಉಪ ನಿರೀಕ್ಷಕ ಮುರಳೀಧರ ನಾಯ್ಕ ಹಾಗೂ ನಗರ ಠಾಣೆ ಸಿಬ್ಬಂದಿ ಉಪಸ್ಥಿತರಿದ್ದರು.
ಕ್ರೈಸ್ಟ್ಕಿಂಗ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ, ದೀಪಕ್, ಸುಕನ್ಯಾ, ಅಭಿನಯ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ರಸಾದ್ ರ್ಯಾಲಿಯ ನೇತೃತ್ವ ವಹಿಸಿದ್ದರು.