

ಕುಂದಾಪುರ: ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದ್ದು, ಈ ಅವಕಾಶವನ್ನು ಜ್ಞಾನ ಸಂಪಾದನೆ, ಮುಂದಿನ ಜೀವನದ ಬುನಾದಿ ರೂಪಿಸಲು ಬಳಸಬೇಕು. ಈ ಹಂತದಲ್ಲಿ ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾದರೆ ಅವರ ಕುಟುಂಬ ವಾತ್ರವಲ್ಲದೆ ಇಡೀ ಸವಾಜಕ್ಕೆ ಪಿಡುಗಾಗುತ್ತಾರೆ. ಅಧ್ಯಾಪಕರು ಮತ್ತು ಪಾಲಕರ ಸೂಕ್ತ ನಿಗಾ ವಹಿಸುವುದರಿಂದ ಮಕ್ಕಳು ವ್ಯಸನಗಳಿಗೆ ಬಲಿಯಾಗದಂತೆ ತಡೆಯಬಹುದು ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು.
ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆಯ ಕೋಟೇಶ್ವರ ವಲಯದ ಆಶ್ರಯದಲ್ಲಿ ಕೋಟೇಶ್ವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಂಶುಪಾಲ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೋಟೇಶ್ವರ ಬಿ ಒಕ್ಕೂಟ ಅಧ್ಯಕ್ಷೆ ಅರುಂಧತಿ ವೈದ್ಯ, ಕೋಟೇಶ್ವರ ವಲಯ ಮೇಲ್ವಿಚಾರಕಿ ವೇದಾವತಿ, ಸೇವಾ ಪ್ರತಿನಿಧಿಗಳಾದ ವಾಲತಿ ಮತ್ತು ಶೋಭಾ ಉಪಸ್ಥಿತರಿದ್ದರು.
ಉಪನ್ಯಾಸಕ ಜಗದೀಶ್ ಎಚ್.ನಾಯಕ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಜಯಂತಿ ಎಸ್.ಶೆಟ್ಟಿ ವಂದಿಸಿದರು. ಉಪನ್ಯಾಸಕ ಗಣೇಶ ಹೆಬ್ಬಾರ್ ನಿರೂಪಿದರು.