ಜನಜಾಗೃತಿ ವೇದಿಕೆ ಕಾರಡ್ಕ ವಲಯ ಮಹಾಸಭೆ

Published on

ಮುಳ್ಳೇರಿಯ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಾಸರಗೋಡು ತಾಲೂಕಿನ ಕಾರಡ್ಕ ವಲಯದ ಮಹಾಸಭೆ ಕಾಸರಗೋಡು ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ ಅಧ್ಯಕ್ಷತೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರಡ್ಕ ವಲಯ ಕಚೇರಿಯಲ್ಲಿ ನಡೆಯಿತು.

ಜನ ಜಾಗೃತಿ ವೇದಿಕೆ ಕಾರಡ್ಕ ವಲಯಕ್ಕೆ ಆಯ್ಕೆಯಾದ ಸದಸ್ಯರಾದ ಚನಿಯಪ್ಪ ನಾಯ್ಕ ಮತ್ತು ಗಂಗಾಧರ ಮಣಿಯಾಣಿ, ಮಾಜಿ ಅಧ್ಯಕ್ಷ ಬಾಲಕೃಷ್ಣ ರೈ ಅವರನ್ನು ವಲಯ ಅಧ್ಯಕ್ಷ ಬಾಲಕೃಷ್ಣ ರೈ ಗೌರವಿಸಿದರು. ಬಳಿಕ ಕಾರಡ್ಕ ವಲಯಕ್ಕೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ವಲಯ ಅಧ್ಯಕ್ಷರಾಗಿ ಸಂಜೀವ ಶೆಟ್ಟಿ ಮೊಟ್ಟೆಕುಂಜ ಅವರನ್ನು ಆಯ್ಕೆ ಮಾಡಲಾಯಿತು.

ರಾಮಯ್ಯ ರೈ, ಮಾಟೆ ನಾರಾಯಣ, ಬಾಲಕೃಷ್ಣ ರೈ, ಜಯರಾಮ ಪಾಟಾಳಿ ಪಡುಮಲೆ ಮುಂತಾದವರು ಉಪಸ್ಥಿತರಿದ್ದರು. ಕಾರಡ್ಕ ವಲಯ ಮೇಲ್ವಿಚಾರಕ ಸುರೇಶ್ ಸ್ವಾಗತಿಸಿದರು. ವಲಯದಲ್ಲಿ ಜನ ಜಾಗೃತಿ ವೇದಿಕೆಯಿಂದ ನಡೆದ ಕಾರ್ಯಕ್ರಮಗಳ ಅವಲೋಕನ ನಡೆಯಿತು. ವಲಯದಲ್ಲಿ ನಡೆಯಲಿರುವ ಮದ್ಯವರ್ಜನ ಶಿಬಿರ, ಸ್ವಾಸ್ಥೃ ಸಂಕಲ್ಪ, ಪರಿಸರ ಕಾರ್ಯಕ್ರಮ ಬಗ್ಗೆ ಚರ್ಚಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net