

ಸುಳ್ಯ: ಇಲ್ಲಿನ ಜಟ್ಟಿಪಳ್ಳ-ಕೊಡಿಯಾಲಬೈಲು ರಸ್ತೆಯನ್ನು ಅಮೃತ್ 2 ಯೋಜನೆಯಡಿ ಪೈಪ್ ಅಳವಡಿಸಲು ಅಗೆದಿದ್ದು, ಸರಿಯಾಗಿ ಮುಚ್ಚದೆ ಸಂಚಾರ ದುಸ್ತರವಾಗಿದೆ. ಇದನ್ನು ಸರಿಪಡಿಸುವಂತೆ ಒತ್ತಾಯಿಸಿ ನಗರ ಪಂಚಾಯಿತಿಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಮನವಿ ಸ್ವೀಕರಿಸಿದ ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಮುಖ್ಯಾಧಿಕಾರಿ ಸುಧಾಕರ, ಎರಡು ದಿನದಲ್ಲಿ ರಸ್ತೆ ತಾತ್ಕಾಲಿಕ ದುರಸ್ತಿ ಪಡಿಸಿಕೊಡುವುದಾಗಿ ಮತ್ತು ಮಳೆಗಾಲ ಕಳೆದ ತಕ್ಷಣ ರಸ್ತೆ ಸರಿಪಡಿಸುವ ಭರವಸೆ ನೀಡಿದರು.
ನಗರ ಪಂಚಾಯಿತಿ ಸದಸ್ಯ ಡೇವಿಡ್ ದೀರಾ ಕ್ರಾಸ್ತ, ಜಟ್ಟಿಪಳ್ಳ ಸಾರ್ವಜನಿಕರ ಪರವಾಗಿ ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಸಿಎಫ್‌ಸಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಉದ್ಯಮಿ ಶಿಹಾಬ್ ಷಾ, ಮೊಯ್ದೀನ್, ಖಲೀಲ್, ಶಿಹಾಬ್ ಮೊದಲಾದವರು ಉಪಸ್ಥಿತರಿದ್ದರು.