

ಕಂಪ್ಲಿ: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಎಸ್.ಕೋಸಂಬೆ ಗುರುವಾರ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ಮತ್ತು ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ:ಜಿಲ್ಲೆಗಳ ವಿದ್ಯಾರ್ಥಿ ನಿಲಯಗಳ ಸುಧಾರಣೆಗೆ ಕ್ರಮ
ನಂತರ ಮಾತನಾಡಿ, ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾಸಿಕ 100ರಿಂದ 120ಹೆರಿಗೆಗಳಾಗುತ್ತಿದ್ದು, ನವಜಾತ ಶಿಶುಗಳ ರಕ್ಷಣೆಗೆ ಕನಿಷ್ಠ ಐದು ಬೇಬಿ ವಾರ್ಮರ್ಸ್ಸಗಳಿರಬೇಕಿದ್ದು ಕಡಿಮೆ ಸಂಖ್ಯೆಯಲ್ಲಿವೆ. ಎನ್‌ಬಿಎಸ್‌ಯು(ಸ್ಪೆಷಲ್ ನ್ಯೂ ಬಾರ್ನ್ ಕೇರ್ ಯೂನಿಟ್)ಘಟಕ ಕಂಡು ಬಂದಿಲ್ಲ.
ಮಕ್ಕಳ ತಜ್ಞ ವೈದ್ಯರು ಇರಲಿಲ್ಲ. ರಜೆ ಹಾಕಿದ್ದರೆ ಡಿಎಚ್‌ಒ ನಿಯೋಜನೆ ಮೇರೆಗೆ ಮಕ್ಕಳ ತಜ್ಞರನ್ನು ನೇಮಿಸಲು ಮುಂದಾಗಬೇಕಿತ್ತು ಎಂದರು. ಹಾಸ್ಟೆಲ್‌ನಲ್ಲಿ ಗುಣಮಟ್ಟದ ತರಕಾರಿ ಬಳಸುವಂತೆ, ಸ್ವಚ್ಛತೆ ಕಾಪಾಡುವಂತೆ, ನಾಲ್ಕು ಕಡೆ ದೂರು ಪೆಟ್ಟಿಗೆ ಅಳವಡಿಸುವಂತೆ ಸಲಹೆ ನೀಡಿದರು.
1098 ಮತ್ತು 112ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಸಿಎಚ್‌ಸಿ ವೈದ್ಯಾಧಿಕಾರಿ ಡಾ.ರವೀಂದ್ರ ಕನಕೇರಿ, ಹಾಸ್ಟೆಲ್ ವಾರ್ಡನ್ ಕೆ.ವಿರೂಪಾಕ್ಷಪ್ಪ ಇವರು ಸೆ.8ರಂದು ಬಳ್ಳಾರಿಯ ಜಿಪಂನಲ್ಲಿ ನಡೆಯಲಿರುವ ಸಭೆಗೆ ಹಾಜರಾಗುವಂತೆ ಸೂಚಿಸಿದೆ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಂ.ರಾಮಕೃಷ್ಣ ನಾಯಕ, ಸಿಡಿಪಿಒಗಳಾದ ಪ್ರದೀಪ್, ನಾಗರಾಜ ಇತರರಿದ್ದರು.