

ಸವಣೂರ: ಪಟ್ಟಣದ ಸರ್ಕಾರಿ ಕರ್ನಾಟಕ ಪಬ್ಲಿಕ್ ಸ್ಕೂಲ್ಗೆ ಮೂಲ ಸೌಕರ್ಯ ಒದಗಿಸಲು ಒತ್ತಾಯಿಸಿ ಬುಧವಾರ ಶಾಲಾ ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರತಿಭಟನೆ ಕೈಗೊಂಡು, ಡಿಡಿಪಿಐ ಗಿರೀಶ ಪದಕಿ ಅವರಿಗೆ ಮನವಿ ಸಲ್ಲಿಸಿದರು.
7 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿರುವ ಶಿಕ್ಷಕರ ಕೊರತೆ, ಜವಾನರ ಕೊರತೆ ನಿಗಿಸಬೇಕು. ವಿದ್ಯಾರ್ಥಿಗಳಿಗೆ ಸೂಕ್ತ ಬಿಸಿಯೂಟದ ವ್ಯವಸ್ಥೆ ಕಲ್ಪಿಸಬೇಕು. ಶಿಷ್ಯ ವೇತನ ಪಡೆಯಲು ಉಂಟಾಗಿರುವ ತಾಂತ್ರಿಕ ತೊಂದರೆ ನಿವಾರಣೆ ಮಾಡಬೇಕು ಹಾಗೂ ಇತ್ರ ಪ್ರಮುಖ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿಡಿಪಿಐ ಗಿರೀಶ ಪದಕಿ ಪ್ರತಿಭಟನಾಕಾರರೊಂದಿಗೆ ರ್ಚಚಿಸಿ ಕೂಡಲೇ ಇಬ್ಬರು ಶಿಕ್ಷಕರನ್ನು ನೇಮಿಸಿದರು. ವಿದ್ಯಾರ್ಥಿಗಳ ಹಾಗೂ ಪಾಲಕರ ಬೇಡಿಕೆ ಈಡೇರಿಕೆಗಾಗಿ ಸಮಯ ನೀಡಬೇಕು. ಸರ್ವ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.
ಬಿಇಒ ಎಂ.ಎಫ್. ರ್ಬಾ, ಬಿಆರ್ಸಿ ಎಂ.ಎನ್. ಅಡಿವೆಪ್ಪನವರ, ಮುಖ್ಯಗುರು ಎಂ.ಬಿ. ಶಾಂತಗಿರಿ, ಎಸ್ಡಿಎಂಸಿ ಉಪಾಧ್ಯಕ್ಷ ಮಂಜುನಾಥ ಗಾಣಗೇರ, ಪದಾಧಿಕಾರಿಗಳಾದ ಸಂಗಮೇಶ ಯರೇಶಿಮಿ, ದಾಮೋಧರ ಗಿತ್ತೆ, ಪಾಲಕರಾದ ಶಂಕ್ರಯ್ಯ ಹಿರೇಮಠ, ಸುರೇಶ ತಳವಾರ, ಪ್ರವೀಣ ಚರಂತಿಮಠ, ಪ್ರವೀಣ ಬಾಲೇಹೊಸೂರ, ಜಗದೀಶ ಚಕ್ರಸಾಲಿ, ಪಾಂಡುರಂಗ ಜಾಧವ, ರುದ್ರಪ್ಪ ಹರಪನಹಳ್ಳಿ, ಹನುಮಂತ ಕಲಾಲ, ಎಫ್.ಟಿ. ಪೂಜಾರ, ಶರಣು ಮಣಕವಾಡಮಠ, ರಾಜು ಹುಣಸಿಹಣ್ಣಿನವರ, ಬಿ.ಆರ್. ಮುದಿಗೌಡ್ರ, ಲಕ್ಷ್ಮಣ ಜಾಧವ, ಕೆ.ಆರ್. ಭಜಂತ್ರಿ, ಗುರುರಾಜ ಅಗಸರ, ಎಸ್.ಪಿ. ಮಠಪತಿ, ರಾಘವೇಂದ್ರ ರಾಯ್ಕರ್, ಪ್ರೇಮಾ ಹುಲ್ಲಳ್ಳಿ ಇದ್ದರು.