ಕೂಸಿನ ಮನೆಗಳಲ್ಲಿ ಸೌಲಭ್ಯ ಕಲ್ಪಿಸಿ

ಹರಪನಹಳ್ಳಿ ತಾಪಂ ಸಭಾಂಗಣದಲ್ಲಿ ಇಒ ಎ.ಅಪೂರ್ವ ಕುಲಕರ್ಣಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ನರೇಗಾ ಸಹಾಯಕ ನಿರ್ದೇಶಕ ವೈ.ಎಚ್.ಚಂದ್ರಶೇಖರ್, ಪಂಚಾಯತ್‌ರಾಜ್ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್, ತಾಲೂಕು ಯೋಜನಾಧಿಕಾರಿ ನವೀನ್‌ಕುಮಾರ್ ಇದ್ದರು.
ಹರಪನಹಳ್ಳಿ ತಾಪಂ ಸಭಾಂಗಣದಲ್ಲಿ ಇಒ ಎ.ಅಪೂರ್ವ ಕುಲಕರ್ಣಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ನರೇಗಾ ಸಹಾಯಕ ನಿರ್ದೇಶಕ ವೈ.ಎಚ್.ಚಂದ್ರಶೇಖರ್, ಪಂಚಾಯತ್‌ರಾಜ್ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್, ತಾಲೂಕು ಯೋಜನಾಧಿಕಾರಿ ನವೀನ್‌ಕುಮಾರ್ ಇದ್ದರು.
Published on

ಹರಪನಹಳ್ಳಿ: ಕಾರ್ಯಸ್ಥಳದಲ್ಲಿ ಇದ್ದಷ್ಟು ದಿನ ಉತ್ತಮ ಕೆಲಸ ಮಾಡಬೇಕೆಂದು ಸಿಬ್ಬಂದಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎ.ಅಪೂರ್ವ ಕುಲಕರ್ಣಿ ಸೂಚಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕೂಸಿನ ಮನೆಗಳು ಉತ್ತಮವಾಗಿ ನಡೆಯುತ್ತಿದ್ದರೂ ಆರೈಕೆದಾರರಿಗೆ ನರೇಗಾದಡಿ ಕೂಲಿ ಹಣ ಪಾವತಿ ಮಾಡುತ್ತಿಲ್ಲ. ಇನ್ನು ಕೆಲ ಗ್ರಾಪಂಗಳಲ್ಲಿ ಕೂಸಿನ ಮನೆ ನಡೆಯದೇ ಇದ್ದರೂ ಕೂಲಿ ಹಣ ಪಾವತಿ ಆಗುತ್ತಿರುವುದು ಗಮನಕ್ಕೆ ಬಂದಿದೆ. ಕೂಸಿನ ಮನೆಯಲ್ಲಿ ಪೌಷ್ಟಿಕ ಆಹಾರ, ಸ್ವಚ್ಛತೆ, ಫ್ಯಾನ್ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಸೌಲಭ್ಯದಲ್ಲಿ ಲೋಪ ಕಂಡು ಬಂದಲ್ಲಿ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಲ ಜೀವನ್ ಮಿಷನ್ ಯೋಜನೆಯಲ್ಲಿ ಒಎಚ್‌ಟಿಗಳ ಸ್ವಚ್ಛತೆ, ನೀರಿನ ಕ್ಲೋರಿನೇಷನ್, ಶುದ್ಧ ಕುಡಿಯುವ ನೀರು, ಪೈಪ್‌ಲೈನ್, ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಗೃಹ ನಿರ್ಮಿಸಿದ ಫಲಾನುಭವಿಗಳಿಗೆ ಹಣದ ಜಮೆ ಕುರಿತು ಮಾಹಿತಿ ಪಡೆದು ಶೀಘ್ರ ಪ್ರಗತಿಗೆ ಸೂಚಿಸಿದರು. ವಸತಿ ಯೋಜನೆ, ಪಂಚಾಯತ್‌ರಾಜ್ ಬಯೋಮೆಟ್ರಿಕ್ ಹಾಜರಾತಿ, ಸಕಾಲಕ್ಕೆ ಐಪಿಜಿಆರ್‌ಎಸ್ ಪರಿಹಾರ ಅರ್ಜಿಗಳ ವಿಲೇವಾರಿ, ತೆರಿಗೆ ವಸೂಲಾತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.

ತೆರಿಗೆ ಅಭಿಯಾನಕ್ಕೆ ಸಂಬಂಧಿಸಿದಂತೆ ಮನೆ ಮನೆ ಭೇಟಿ ನೀಡಿದರೆ ಸಾಲದು ಸಂತೆ, ಬಸ್ ಸ್ಟಾೃಂಡ್‌ಗಳಲ್ಲಿ ಅಭಿಯಾನದ ಬ್ಯಾನರ್ ಹಾಕಬೇಕು. ವಿಂಡ್ ಫ್ಯಾನ್ ಟವರ್‌ಗಳ ತೆರಿಗೆ, ಅಂಗಡಿ, ಹೋಟೆಲ್, ಬೇಕರಿ ಸೇರಿದಂತೆ ಹೆಚ್ಚು ತೆರಿಗೆಗೆ ಒಳಪಡುವ ವಾಣಿಜ್ಯ ಮಳಿಗೆಗಳಿಂದ ಮೊದಲು ವಸೂಲಿ ಮಾಡುವಂತೆ ಇಒ ಅಪೂರ್ವ ಸೂಚಿಸಿದರು. ತಾಂತ್ರಿಕ ಸಂಯೋಜಕ ನಾಗರಾಜ ನಾಯ್ಕ, ಐಇಸಿ ಸಂಯೋಜಕ ವಸಿಗೇರಪ್ಪ, ಎಂಐಎಸ್ ಸಂಯೋಜಕ ಮೈಲಾರಿ ಗೌಡ, ಪಿಡಿಒಗಳು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net