ನಾಳೆಯಿಂದ ಪ್ರತಿ ಗ್ರಾಮದಲ್ಲೂ ಪ್ರತಿಭಟನೆ

Published on

ಗುಡಿಬಂಡೆ: ತಾಲೂಕಿನ ಪ್ರತಿ ಗ್ರಾಮದಲ್ಲೂ ಮೂಲ ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸಲು ಜನಪ್ರತಿನಿಧಿಗಳು ರ್ನಿಲಕ್ಷ ತೋರುತ್ತಿರುವುದರಿಂದ ಸೆ.26 ರಂದು ತಾಲೂಕಿನ ಪ್ರತಿ ಗ್ರಾಪಂ ಮುಂದೆ ತಾಲೂಕು ಸಿಪಿಎಂಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಜಯರಾಮರೆಡ್ಡಿ ತಿಳಿಸಿದರು.ಪಟ್ಟಣದ ಸಿಪಿಎಂ ಪಕ್ಷದ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಸಮಸ್ಯೆಗಳಿದ್ದು, ಬಗೆಹರಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸರಿಯಾಗಿ ಸ್ವಂದಿಸುತ್ತಿಲ್ಲ, ಆದ್ದರಿಂದ ಸೆ.26 ರಂದು ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ ಎಂದರು. ಡಿವೈಎಫ್​ಐ ಜಿಲ್ಲಾ ಕಾರ್ಯದರ್ಶಿ ಉಪಪಾರಹಳ್ಳಿ ಶ್ರೀನಿವಾಸ ಮಾತನಾಡಿ, ತಾಲೂಕಿನ ಎಲ್ಲ ಗ್ರಾಮಗಳಲ್ಲೂ ಸ್ವಚ್ಛತೆಯಿಲ್ಲದೇ ಅನೈರ್ಮಲ್ಯದಿಂದ ಕೂಡಿದೆ, ಜತೆಗೆ ಸರ್ಕಾರದಿಂದ ರೈತರಿಗೆ ನಿವೇಶನ ಹಂಚಿಕೆ ಮಾಡುತ್ತಿಲ್ಲ. ರಾಜಕೀಯ ಪ್ರಭಾವಿತರು ಸರ್ಕಾರಿ ಜಮೀನುಗಳನ್ನು ಅಕ್ರಮಿಸಿಕೊಂಡಿದ್ದು, ಅವುಗಳನ್ನು ತೆರವು ಮಾಡಿಸಿ ಬಡವರಿಗೆ ನಿವೇನ ನೀಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net