

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಮನೆ ಮುಂದೆ ಮಂಗಳವಾರ ಬೆಳ್ಳಂಬೆಳಗ್ಗೆ ಕಸ ಗುಡಿಸುವ ಮೂಲಕ ವಿದ್ಯಾರ್ಥಿಗಳ ಪಾಲಕರು ಪ್ರತಿಭಟನೆ ನಡೆಸಿದರು.
ಖಾಸಗಿ ಶಾಲೆಗಳ ಹೆಚ್ಚುವರಿ ಶುಲ್ಕಕ್ಕೆ ಬ್ರೇಕ್ ಹಾಕದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಪಾಲಕರು, ಬಸವೇಶ್ವರ ನಗರದಲ್ಲಿರುವ ಸುರೇಶ್ ಕುಮಾರ್ರ ಮನೆ ಮುಂದೆ ಕಸ ಗುಡಿಸುತ್ತ ಮೌನ ಪ್ರತಿಭಟನೆಗೆ ಕುಳಿತರು. ಶಾಲಾ ಶುಲ್ಕ ವಿಚಾರವಾಗಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
'ಪ್ರತಿಭಟನೆ ನಡೆಸಲು ಅನಮತಿ ಪಡೆದಿಲ್ಲ. ನೀವೆಲ್ಲ ಇಲ್ಲಿಂದ ಹೊರಡಿ, ನೀವು ಮಾಡ್ತಿರೋದು ಸರಿ ಅಲ್ಲ...' ಎಂದು ಮನವಿ ಮಾಡಿದರೂ ಹೋಗದೆ ಪ್ರತಿಭಟನೆಗೆ ಮುಂದಾದ ಕೆಲ ಪೋಷಕರನ್ನ ವಶಕ್ಕೆ ಪಡೆದ ಪೊಲೀಸರು ಬ್ಯಾಡರಹಳ್ಳಿಗೆ ಠಾಣೆಗೆ ಕರೆತಂದರು.
ಕ್ಷಣಾರ್ಧದಲ್ಲೇ ಸುರೇಶ್ ಕುಮಾರ್ರ ಮನೆ ಸಂಪರ್ಕಿಸುವ ರಸ್ತೆಗಳಿಗೆ ಪೊಲೀಸ್ ಸರ್ಪಗಾವಲು ನಿತಿಂತ್ತು. ಜತೆಗೆ ಆ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಲಾಗಿತ್ತು.