ಬೇಡಿಕೆ ಈಡೇರಿಕೆಗೆ 12ರಂದು ಧರಣಿ

Published on

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಕೇಂದ್ರದಲ್ಲಿ ಆ.12ರಿಂದ ಮೂರು ದಿನಗಳ ಅಹೋರಾತ್ರಿ ಧರಣಿಯನ್ನು ಕರ್ನಾಟಕ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂ ಕೈಗೊಂಡಿದೆ.

ನಿರಂತರವಾಗಿ ಹೋರಾಟಗಳನ್ನು ನಡೆಸಿ, ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುತ್ತಿದೆ. ಇದೇ ವೇಳೆ ಕೊಟ್ಟ ಭರವಸೆಯಂತೆ ನಡೆದುಕೊಳ್ಳದಿರುವುದು ದುರದೃಷ್ಟಕರ ಎಂದು ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸಂದ ರಾಜ್ಯ ಉಪಾಧ್ಯ ಹನುಮೇಶ್​ ಬೇಸರಿಸಿದರು.

ಮುಖ್ಯಮಂತ್ರಿಗಳು ೂಷಿಸಿದ ಮಾದರಿಯಲ್ಲಿ ಕಾರ್ಯಕರ್ತೆಯರಿಗೆ ರಾಜ್ಯ ಗೌರವಧನ ಹಾಗೂ ಕೇಂದ್ರ ಸರ್ಕಾರದ ಪೋತ್ಸಾಹ ಧನ ಸೇರಿ ಪ್ರತಿ ತಿಂಗಳು 10 ಸಾವಿರ ರೂ. ಹಾಗೂ ಬಜೆಟ್​ನಲ್ಲಿ ೂಷಿಸಿದಂತೆ ಅಂಗನವಾಡಿ ಹಾಗೂ ಬಿಸಿಯೂಟ ನೌಕರರಿಗೆ 1 ಸಾವಿರ ಪೋತ್ಸಾಹ ಧನ ನೀಡಬೇಕು. ಆಯಾ ವ್ಯಾಪ್ತಿಯ ಜನಸಂಖ್ಯೆ ಪ್ರಮಾಣವನ್ನಾಧರಿಸಿ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ವಜಾಗೊಳಿಸಬಾರದು ಎಂದು ಒತ್ತಾಯಿಸಿದರು.

ಅವೈಾನಿಕ ಆಶಾ ಪರ್ಫಾಮೆನ್ಸ್​ ಅಪೆಸಲ್​ ಕೈ ಬಿಡುವುದು, ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡುಗಂಟು ವಿತರಣೆ ಸೇರಿ ವಿವಿಧ ಬೇಡಿಕೆಗಳ ಬಗ್ಗೆ ಗಮನ ಸೆಳೆಯುವ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಸಂದ ಜಿಲ್ಲಾಧ್ಯೆ ಸರಸ್ವತಮ್ಮ, ಕಾರ್ಯದರ್ಶಿ ರೇಷ್ಮಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net