ಸರ್ಕಾರದ ಭ್ರಷ್ಟಾಚಾರ ತನಿಖೆ ಅವಶ್ಯ : ಬಿಜೆಪಿ ಮಂಜೇಶ್ವರ ಮಂಡಲಾಧ್ಯಕ್ಷ ಆದರ್ಶ ಒತ್ತಾಯ

Published on

ಮಂಜೇಶ್ವರ: ಕೇರಳದ ಎಡರಂಗ ಸರ್ಕಾರ ಕುಟುಂಬಶ್ರೀ ಕಾರ್ಯಕರ್ತರನ್ನು ಕಮ್ಯುನಿಸ್ಟ್‌ರ ಕೆಲಸ ಮಾಡುವ ಜೀತದಾಳುಗಳನ್ನಾಗಿ ಮಾಡಿದೆ. ವರ್ಕಾಡಿ ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಸಿಡಿಎಸ್ ಪದವಿ ಅಂದರೆ ಕಮ್ಯುನಿಸ್ಟ್ ಡೆಮೋಕ್ರೆಟಿಕ್ ಸೊಸೈಟಿ ಎಂದು ನಂಬಿದ್ದಾರೆ. ಸರ್ಕಾರದಿಂದ ನಡೆದ ಭಾರಿ ಭ್ರಷ್ಟಾಚಾರದ ತನಿಖೆ ಆಗಲೇಬೇಕು ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಆಗ್ರಹಿಸಿದರು.

ವರ್ಕಾಡಿ ಪಂಚಾಯಿತಿ ಎಡರಂಗದ ಆಡಳಿತದ ಭ್ರಷ್ಟಾಚಾರ ತನಿಖೆ ಆಗ್ರಹಿಸಿ ಬಿಜೆಪಿ ವರ್ಕಾಡಿ ಪಂಚಾಯಿತಿ ಸಮಿತಿ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನಾ ಜಾಥಾದಲ್ಲಿ ಮಾತನಾಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುಣೀಲ್ ಪ್ರತಿಭಟನಾ ಜಾಥಾ ಉದ್ಘಾಟಿಸಿದರು. ನಂತರ ಮೆರವಣಿಗೆ ಮೂಲಕ ಪಂಚಾಯಿತಿ ಕಚೇರಿಗೆ ಜಾಥಾ ನಡೆಯಿತು.

ಭಾಸ್ಕರ್ ಪೊಯ್ಯೇ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮುರಳೀಧರ ಯಾದವ್, ಮಣಿಕಂಠ ರೈ, ರಮಣಿ, ಸದಾಶಿವ ಮಂಟಮೆ, ದೂಮಪ್ಪ ಶೆಟ್ಟಿ, ರಾಜ್ ಕುಮಾರ್ ಶೆಟ್ಟಿ, ನಾಗೇಶ್ ಬಳ್ಳೂರ್, ವಿವೇಕಾನಂದ, ಜಗದೀಶ್ ಚೆಂಡ್ಲಾ, ಮಮತಾ ಕುಲಾಲ್, ಆಶಾಲತಾ, ಪದ್ಮಾವತಿ, ಶ್ವೇತಾ ಪಾವಳ, ರವಿರಾಜ್, ಆನಂದ ತಚ್ಚಿರೆ, ಹರೀಶ್ ಕನ್ನಿಗುಳಿ ಉಪಸ್ಥಿತರಿದ್ದರು. ರಕ್ಷಣ್ ಅಡಕಳ ಸ್ವಾಗತಿಸಿದರು. ಯತೀರಾಜ್ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net