ಶವದೊಂದಿಗೆ ನಾರಾಯಣಪುರ ಪೊಲಿಸ್ ಠಾಣೆಯ ಮುಂದೆ ಕುಟುಂಬಸ್ಥರ ಪ್ರತಿಭಟನೆ

IMG-20250426-WA0040
Published on

ಕೊಡೇಕಲ್: ವ್ಯಕ್ತಿಯೊರ್ವ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕುಟುಂಬದವರು ಶವದೊಂದಿಗೆ ನಾರಾಯಣಪುರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸುತ್ತಿರುವ ಘಟನೆ ಸಮೀಪದ ನಾರಾಯಣಪುರ ಗ್ರಾಮದಲ್ಲಿ ಶನಿವಾರ ರಾತ್ರಿ ೭ ಗಂಟೆಯಿಂದ ನಡೆಯುತ್ತಿದೆ,

ಸಮೀಪದ ಜೊಗುಂಡಬಾವಿ ಗ್ರಾಮದ ಗೌಡಪ್ಪ ಚವನಬಾವಿ (40) ಎಂಬ ವ್ಯಕ್ತಿ ಶನಿವಾರ ಮೃತಪಟ್ಟಿದ್ದು ನಾರಾಯಣಪುರ ಪೊಲಿಸ ಠಾಣೆಯ ಪಿಎಸ್ಐ ಮತ್ತು ಸಿಬ್ಬಂದಿಗಳೆ ನನ್ನ ಪತಿಯ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸುತ್ತಿರುವ ಮೃತ ವ್ಯಕ್ತಿ ಗೌಡಪ್ಪ ಚವನಬಾವಿ ಪತ್ನಿ ರೇಣುಕಮ್ಮ ಆರೋಪಿಸಿದ್ದು ನ್ಯಾಯ ಬೆಕೆಂದು ಆಗ್ರಹಿಸಿ ಠಾಣೆಯ ಮುಂದೆ ಕಳೆದ 1 ಗಂಟೆಯಿಂದ ಪ್ರತಿಭಟನೆ ನಡೆಯುತ್ತಿದ್ದಾರೆ.

ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಪೃತ್ವಿಕ್ ಶಂಕರ್ ಸ್ಥಳಕ್ಕೆ ಆಗಮಿಸಿದ್ಸು‌ ಮಾತುಕತೆ ನಡೆಸಿದ್ದಾರೆ. ನಾರಾಯಣಪುರ ಪೊಲಿಸ್ ಠಾಣೆಯ ಮುಂದೆ ನೂರಾರು ಸಂಖ್ಯೆಯಲ್ಲಿ ಜನರು ಜಮಾವಣೆಗೊಂಡಿದ್ದು ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net