ಪಿಡಿಒ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

17RAM2
Published on

ರಾಮದುರ್ಗ: ಯರಗಟ್ಟಿ ತಾಲೂಕಿನ ಗ್ರಾಪಂ ಪಿಡಿಒ ಮೇಲಿನ ಹಲ್ಲೆ ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕು ಸರ್ಕಾರಿ ನೌಕರರ ಸಂದ ವತಿಯಿಂದ ಪಟ್ಟಣದಲ್ಲಿ ತಹಸೀಲ್ದಾರಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ನೌಕರರ ಸಂದ ತಾಲೂಕಾಧ್ಯ ಐ.ವೈ.ಪವಾಡಿಗೌಡ್ರ ಮಾತನಾಡಿ, ರಾಜ್ಯಾದ್ಯಂತ ಸರ್ಕಾರಿ ನೌಕರರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದ್ದು, ನೌಕರರಿಗೆ ರಣೆ ಇಲ್ಲವಾಗಿದೆ. ಪಿಡಿಒ ಮೇಲೆ ಹಲ್ಲೆ ಪ್ರಕರಣವನ್ನು ಜಿಲ್ಲಾ-ಧಿಕಾರಿಗಳು ಗಂಭೀರವಾಗಿ ಪರಿಶೀಲಿಸಿ ಹಲ್ಲೆಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂದ ಕಾರ್ಯದರ್ಶಿ ಎಂ.ಎಸ್​.ಜಂಗವಾಡ, ಖಜಾಂಚಿ ಬಿ.ಬಿ.ಹರನಟ್ಟಿ, ರಾಜ್ಯ ಪರಿಷತ್​ ಸದಸ್ಯ ಮಂಜು ಪರಪ್ಪನವರ, ಪಿಡಿಒಗಳಾದ ಎಸ್​.ಎಸ್​.ಹೊಂಗಲ, ಮಾಲಾ ನೀಲರೆಡ್ಡಿ, ಕೆ.ಎಚ್​ ಶಲ್ಡಗೇರಿ, ವಿಜಯಕುಮಾರ ಒನಕ್ಯಾಳ, ಜಗದೀಶ ದೇಸಾಯಿ, ರಾಜು ಬಸರಿಕಟ್ಟಿ, ವೀರಣ್ಣ ಗಣಾಚಾರಿ, ಎನ್​.ಬಿ.ಪಾಟೀಲ, ಐ.ಪಿ.ಮುಳ್ಳೂರ,

ಸುಭಾಸ ಹುಣಸಿಕಟ್ಟಿ, ಗಂಗಮ್ಮ ಪಾಟೀಲ, ಎಸ್​.ಎಂ.ವಾಲಿ, ಎಸ್​.ಎ.ಕಾಂಬಳೆ, ನಿತೀಶ ಗಾಣಿಗೇರ, ಉಮೇಶ ಗಡ್ಡಿ, ಹೇಮಾ ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net