ಕಾಂಗ್ರೆಸ್ ದುರಾಡಳಿತಕ್ಕೆ ಆಕ್ರೋಶ : ಗಂಜಿಮಠ, ಎಡಪದವು, ಮುತ್ತೂರು, ಕುಪ್ಪೆಪದವಲ್ಲಿ ಹೋರಾಟ

New Project (52)
Published on

ಗುರುಪುರ: ಬೆಲೆ ಏರಿಕೆ, ಏಕ ವಿನ್ಯಾಸ ಲೇಔಟ್, 9/11 ನಿವೇಶನ, ಪಡಿತರ ಚೀಟಿ ಸ್ಥಗಿತ, ಕಟ್ಟಡ ಕಾರ್ಮಿಕರು, ಇತರ ಕಾರ್ಮಿಕರ ಸಮಸ್ಯೆ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ ಬಿಡುಗಡೆ ಮತ್ತಿತರ ಜನಪರ ವಿಷಯಗಳಿಗೆ ಸಂಬಂಧಿಸಿದಂತೆ ಜನ ವಿರೋಧಿ ಸರ್ಕಾರವಾಗಿ ಮೆರೆಯುತ್ತಿರುವ ರಾಜ್ಯ ಕಾಂಗ್ರೆಸ್‌ನ ದುರಾಡಳಿತ ವಿರುದ್ಧ ಸೋಮವಾರ ಕುಪ್ಪೆಪದವು, ಗಂಜಿಮಠ, ಎಡಪದವು, ಪಡುಪೆರಾರ ಗ್ರಾಪಂ ಕಚೇರಿಗಳ ಎದುರು ಬಿಜೆಪಿ ಪ್ರತಿಭಟನಾ ಸಭೆ ನಡೆಸಿ ಸರ್ಕಾರದ ವಿರುದ್ಧ ಜನಾಂದೋಲನಕ್ಕೆ ಕರೆ ನೀಡಿತು.

ಗಂಜಿಮಠ ಗ್ರಾಪಂ ಕಚೇರಿ ಎದುರು ಆಯೋಜಿಸಲಾದ ಪ್ರತಿಭಟನಾ ಸಭೆಯಲ್ಲಿ ಮಾಜಿ ಸಂಸದ, ಎಡಪದವು ಗ್ರಾಪಂನಲ್ಲಿ ಬಿಜೆಪಿ ಮುಖಂಡ ಜನಾರ್ದನ ಗೌಡ, ಕುಪ್ಪೆಪದವು ಗ್ರಾಪಂನಲ್ಲಿ ವಿಕಾಸ್ ಗೌಡ ಪುತ್ತೂರು, ಮುತ್ತೂರು ಗ್ರಾಪಂನಲ್ಲಿ ಸೋಹನ್ ಅತಿಕಾರಿ, ಪಡುಪೆರಾರ ಗ್ರಾಪಂ ಕಚೇರಿ ಎದುರು ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪೈ ಮತ್ತಿತರರು ಕಾಂಗ್ರೆಸ್ ಆಡಳಿತವನ್ನು ಟೀಕಿಸಿದರು.

ಸಿದ್ದರಾಮಯ್ಯ, ಕಾಂಗ್ರೆಸ್ ಸಚಿವರ ವಿರುದ್ಧ ಧಿಕ್ಕಾರ ಕೇಳಿ ಬಂತು. ಪಿಡಿಒಗಳ ಮೂಲಕ ರಾಜ್ಯಪಾಲರಿಗೆ ಮನವಿ ನೀಡಲಾಯಿತು. ಬಿಜೆಪಿ ಮುಖಂಡರಾದ ಪ್ರಸಾದ್ ಕುಮಾರ್ ಎಡಪದವು, ಮಹಾಬಲ ಸಾಲ್ಯಾನ್, ಗುರುಪ್ರಸಾದ್, ಸಂತೋಷ್ ಆಳ್ವ, ಗಣೇಶ್ ಪಾಕಜೆ, ಅನಸೂಯ ಭಂಡಾರಿ, ಗಂಗಾಧರ ಪೂಜಾರಿ, ಕುಶಾಲ್ ಕುಮಾರ್, ಪಡುಪೆರಾದ ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ ಗೌಡ, ಉಪಾಧ್ಯಕ್ಷ ಜಯಂತ ಪೂಜಾರಿ, ಅಮರೇಶ್ ಬೇಕಲ್, ವೆಂಕಟೇಶ್ ಭಟ್, ನವೀನ್ ನಾಯಕ್, ರುಕ್ಮಯ ನಾಯ್ಕ, ಪಕ್ಷದ ಪದಾಧಿಕಾರಿಗಳು, ಬಿಜೆಪಿ ಬೆಂಬಲಿತ ಪಂಚಾಯಿತಿಗಳ ಸದಸ್ಯರು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net