

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಯೋಗ ದಿನದ ಅಂಗವಾಗಿ ತಲಪಾಡಿಯಲ್ಲಿರುವ ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಂದ ಭಾರತ ಸರ್ಕಾರದ ಆಯುಷ್ ಸಚಿವಾಲಯದಡಿ ಇರುವ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಯೋಗ ಆ್ಯಂಡ್ ನ್ಯಾಚುರೋಪತಿ ಸಹಯೋಗದಲ್ಲಿ ಮಾನಸಿಕ ಆರೋಗ್ಯ ಮತ್ತು ಸ್ವಾಸ್ಥೃಕ್ಕಾಗಿ ಮೀಸಲಾದ ಯೋಗ ಸಮಾವೇಶ ತಲಪಾಡಿ ಭೂವರಾಹ ಸಭಾಂಗಣದಲ್ಲಿ ನಡೆಯಿತು.
ಲಕ್ನೋ ಬಿಬಿಎ ಸೆಂಟ್ರಲ್ ವಿಶ್ವವಿದ್ಯಾಲಯದ ಯೋಗ ವಿಭಾಗದ ಪ್ರೊ.ನವೀನ್ ಜಿ.ಹಾಲಪ್ಪ, ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾಸರಗೋಡು ಪ್ರಕೃತಿ ಚಿಕಿತ್ಸಾ ಕ್ಲಿನಿಕಲ್ಸ್ ಮತ್ತು ಡಾ.ರೋಶಿಥಾಸ್ ಹೆಲ್ತ್ ಕ್ಲಿನಿಕ್ ಸಿಇಒ ಡಾ.ರೋಶಿಥಾ ವಯಸ್ಸಾದವರಲ್ಲಿ ಮಾನಸಿಕ ಸ್ವಾಸ್ಥೃ: ಯೋಗದ ದೃಷ್ಟಿಕೋನ ಎಂಬ ವಿಚಾರದಲ್ಲಿ, ಮಂಗಳೂರು ವಿಶ್ವವಿದ್ಯಾಲಯದ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗ ಉಪನ್ಯಾಸಕ ಡಾ.ಉದಯ್ ಕುಮಾರ್ ಹಿರಿಯರಲ್ಲಿ ಅರಿವಿನ ಆರೋಗ್ಯ ಮತ್ತು ಭಾವನಾತ್ಮಕ ಸಮತೋಲನಕ್ಕಾಗಿ ಸರಳ ಯೋಗಾಭ್ಯಾಸಗಳು ಎಂಬ ವಿಚಾರದಲ್ಲಿ ಉಪನ್ಯಾಸ ನೀಡಿದರು.
ಶಾರದಾ ಯೋಗ, ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಪ್ರಾಂಶುಪಾಲ ಡಾ.ನಂದೀಶ್ ಸ್ವಾಗತಿಸಿದರು. ಡಾ.ಶರತ್ ಕೆಪಿಎಂ ವಂದಿಸಿದರು. ಡಾ.ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು. ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಿಬ್ಬಂದಿಯಿಂದ 100ಕ್ಕೂ ಹೆಚ್ಚು ಹಿರಿಯ ನಾಗರಿಕರಿಗೆ ಪ್ರಾಯೋಗಿಕ ಯೋಗ ಅಧಿವೇಶನ ನಡೆಸಲಾಯಿತು.