ಕೆಲಸಕ್ಕೆ ತಕ್ಕಂತೆ ಕೂಲಿಗಾಗಿ ತಾಪಂ ಕಚೇರಿ ಎದುರು ಪ್ರತಿಭಟನೆ

HKR PROTESTSSSSSSSSS
Published on

ಹಿರೇಕೆರೂರ: ತಾಲೂಕಿನ ಬುರಡಿಕಟ್ಟಿ ಗ್ರಾಪಂ ವ್ಯಾಪ್ತಿಯ ಬಾಳಂಬೀಡ ಗ್ರಾಮದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ನೀಡದಿರುವುದನ್ನು ವಿರೋಧಿಸಿ ಪಟ್ಟಣದ ತಾಪಂ ಕಚೇರಿಯ ಎದುರು ಬುಧವಾರ ಸಂಜೆ ಕರ್ನಾಟಕ ವ್ಯವಸಾಯ ವೃತ್ತಿಪರ ಯೂನಿಯನ್ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು.


ನಾಗರತ್ನ ಭರಮಗೌಡ್ರ ಮಾತನಾಡಿ, ಗ್ರಾಮದಲ್ಲಿ ನಾವು ಮಾಡಿದ ಕೆಲಸದ ಅಳತೆಗೆ ತಕ್ಕಂತೆ ಕೂಲಿ ಹಣ ನೀಡುತ್ತಿಲ್ಲ, ತಜ್ಞರು ನಾವು ಮಾಡಿದ ಕೆಲಸದ ಅಳತೆಯನ್ನು ಸರಿಯಾಗಿ ಮಾಡದೆ ತಮಗೆ ಮನಬಂದಂತೆ ಮಾಡಿ ಅದರಲ್ಲಿ ಅಳತೆಯನ್ನು ತಪ್ಪಾಗಿ ನಮೂದಿಸಿದ್ದಾರೆ.

ಈ ಹಿಂದೆ ೧ನೇ ಬ್ಯಾಚ್‌ಗೆ (ಎನ್‌ಎಂಆರ್) ನಲ್ಲಿ ೩೧೬ ಇದ್ದು, ನಮಗೆ ೧೨೫ ರೂ ಹಾಕಿದ್ದಾರೆ. ಈಗ ೧೬೫ ಮತ್ತು ೨ನೇ ಬ್ಯಾಚಿಗೆ ೨೪೫ ರೂ.ಗಳಂತೆ ಕೂಲಿ ಹಣ ಹಾಕಿದ್ದಾರೆ.

ಈ ಬಗ್ಗೆ ಎಲ್ಲ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ತೋರಿಸಿದ್ದು, ಅಳತೆ ಮಾಡಿಸಿದಾಗ ಅದು ಹೆಚ್ಚಾಗಿದ್ದು, ಇದರಲ್ಲಿ ಬರಿಗಾಲ ತಜ್ಞ ಅಧಿಕಾರಿ ತಮ್ಮ ಕೈಚಳಕ ತೋರಿಸಿ, ಕಡಿಮೆ ಅಳತೆಯ ಲೆಕ್ಕ ಕೊಟ್ಟು ನಮಗೆ ಮೋಸ ಮಾಡಿದ್ದಾರೆ. ಈ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.


ತಾಪಂ ಇಒ ಶಶಿಧರ್ ಅವರು, ಇಲಾಖೆಗೆ ಸಂಬಂಧಿಸಿದ ಸಭೆ ಇರುವುದರಿಂದ ಬೆಂಗಳೂರಿಗೆ ತೆರಳಿದ್ದು, ಸ್ಥಳದಲ್ಲಿ ಯಾವೊಬ್ಬ ಅಧಿಕಾರಿಗಳು ಇವರಿಗೆ ಸೂಕ್ತ ಉತ್ತರ ಕೊಡಲಿಲ್ಲ. ಕೂಲಿ ಕಾರ್ಮಿಕರಿಗೆ ಸಮಾಧಾನಪಡಿಸುವ ಗೋಜಿಗೆ ಹೋಗಲಿಲ್ಲ. ಇದರಿಂದ ಕೋಪಗೊಂಡ ಕಾರ್ಮಿಕರು ಪ್ರತಿಭಟನೆ ಮುಂದುವರಿಸಿದ್ದಾರೆ.


ಮಂಜುಳಾ ಭರಮಗೌಡ್ರ, ವಜ್ರಗೌಡ ಭರಮಗೌಡ್ರ, ಕವಿತಾ ತಡಗಣಿ, ಮಹಾದೇವಪ್ಪ ನಿಂಗನಗೌಡ್ರ, ಗಣೇಶ ಭರಮಗೌಡ್ರ, ದೇವರಾಜ ಹಾಲುಂಡೇರ, ಗಿರೀಶ ಭರಮಗೌಡ್ರ, ಸಂತೋಷ ಚಿಕ್ಕಮ್ಮನವರ ಹಾಗೂ ಕಾರ್ಮಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net