ಕುಡಿಯುವ ನೀರಿಗಾಗಿ ಪ.ಪಂ. ಎದುರು ಪ್ರತಿಭಟನೆ

23 ylp 02 (strike)
Published on

 ಯಲ್ಲಾಪುರ: ಪಟ್ಟಣದ ಧಾತ್ರಿ ಲೇ ಔಟ್​ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದಾಗಿ ಪ.ಪಂ. ಅಧಿಕಾರಿಗಳು ಭರವಸೆ ನೀಡಿಯೂ ಈಡೇರಿಸದ ಹಿನ್ನೆಲೆಯಲ್ಲಿ ಗುರುವಾರ ಧಾತ್ರಿ ನಗರದ ನಿವಾಸಿ ಮಂಜುನಾಥ ಹೆಗಡೆ ಪಪಂ ಕಚೇರಿ ಎದುರು ಧರಣಿ ನಡೆಸಿದರು.

ಕೆಲವು ದಿನಗಳ ಹಿಂದೆ ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದಾಗ ಸ್ಥಳಕ್ಕೆ ಬಂದಿದ್ದ ಪ.ಪಂ. ಮುಖ್ಯಾಧಿಕಾರಿ ಸುನೀಲ ಗಾವಡೆ, ಒಂದು ವಾರದೊಳಗೆ ನೀರಿನ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದರು. ಆದರೆ, ತಿಂಗಳು ಸಮೀಪಿಸಿದರೂ ಯಾವುದೇ ಕ್ರಮ ಆಗದ ಹಿನ್ನೆಲೆಯಲ್ಲಿ ಮಂಜುನಾಥ ಹೆಗಡೆ ಗುರುವಾರ ಮತ್ತೊಮ್ಮೆ ಧರಣಿ ನಡೆಸಿದರು. ಸ್ಥಳಕ್ಕೆ ಪ.ಪಂ. ಅಧ್ಯಕ್ಷೆ ನರ್ಮದಾ ನಾಯ್ಕ, ಮುಖ್ಯಾಧಿಕಾರಿ ಭೇಟಿ ನೀಡಿದರು. ಇನ್ನು ಹದಿನೈದು ದಿನದೊಳಗೆ ನೀರಿನ ಸಮಸ್ಯೆ ಬಗೆಹರಿಸಿಕೊಡುವುದಾಗಿ ಮುಖ್ಯಾಧಿಕಾರಿ ಸುನೀಲ ಗಾವಡೆ ಲಿಖಿತ ಭರವಸೆ ನೀಡಿದರು. ನಂತರ ಮಂಜುನಾಥ ಹೆಗಡೆ ಧರಣಿ ಕೈಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net