ಜನರಿಗೆ ಜಮೀನು ಹಕ್ಕು ಸಿಗದಿದ್ದರೆ ಪ್ರತಿಭಟನೆ

hbr
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಕುಮ್ಕಿ ಜಮೀನುಗಳನ್ನು ಮಂಜೂರು ವಾಡಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಬಗರ್‌ಹುಕುಂ, ಅಕ್ರಮಸಕ್ರಮ ಅರ್ಜಿದಾರರ ಅರ್ಜಿ ಮಂಜೂರು ವಾಡದೇ ಜನರಿಗೆ ಅನ್ಯಾಯ ವಾಡಲಾಗುತ್ತಿದೆ. ಸಾವಿರಾರು ಕುಟುಂಬಗಳಿಗೆ ತೊಂದರೆಯಾಗುತ್ತಿದ್ದು, ಜನರಿಗೆ ಜಮೀನಿನ ಹಕ್ಕು ನೀಡದಿದ್ದರೆ ಸಮಿತಿಯು ಹೋರಾಟ ನಡೆಸಲಿದೆ ಎಂದು ಹೆಬ್ರಿ-ಕಾರ್ಕಳ ತಾಲೂಕು ಪ್ರಗತಿಪರ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಹೇಳಿದರು.

ಹೆಬ್ರಿ ಅನಂತಪದ್ಮನಾಭ ಸನ್ನಿಧಿ ಸಭಾಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ವಾತನಾಡಿದರು.

ಹೆಬ್ರಿ ತಾಲೂಕು ಕಚೇರಿ ಮತ್ತು ಸರ್ವೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಜನರ ಕೆಲಸಗಳು ವಿಳಂಬ, ಹೆಬ್ರಿಯ ಭೂನ್ಯಾಯ ಮಂಡಳಿಗೆ ಕಾಯಂ ಅಧಿಕಾರಿ ನಿಯೋಜನೆ ವಾಡುವುದು ಸಹಿತ ಹಲವು ವಿಚಾರಗಳ ಕುರಿತು ಚರ್ಚಿಸಿ, ಉಸ್ತುವಾರಿ ಸಚಿವರ ಮೂಲಕ ಸರ್ಕಾರದ ಗಮನ ಸೆಳೆಯಲು ತೀರ್ವಾನಿಸಲಾಯಿತು.

ಎಚ್.ಕೆ.ನಾರಾಯಣ ನಾಯ್ಕ, ಸಂತೋಷ್‌ಕುವಾರ್ ಶೆಟ್ಟಿ ನಾಯರಕೋಡು, ಬಾಲಚಂದ್ರ ಮುದ್ರಾಡಿ, ರಾವೇಂದ್ರ ನಾಯ್ಕ ಹೆಬ್ರಿ, ದಯಾನಂದ ಪೂಜಾರಿ ಮಡಾಮಕ್ಕಿ, ರಾಮಕೃಷ್ಣ ಆಚಾರ್ಯ, ಭಾಸ್ಕರ ಶೆಟ್ಟಿ, ರಮೇಶ ಶೆಟ್ಟಿ, ಹೆಬ್ರಿ ಕಾರ್ಕಳ ತಾಲೂಕು ಪ್ರಗತಿಪರ ನಾಗರಿಕ ಹೋರಾಟ ಸಮಿತಿ ನಿರ್ದೇಶಕರಾದ ಭಾಸ್ಕರ ಜೋಯಿಸ್, ಮುಟ್ಲುಪಾಡಿ ಸತೀಶ ಶೆಟ್ಟಿ, ವಕೀಲ ಕೆ.ಕೃಷ್ಣ ಶೆಟ್ಟಿ, ಬೇಳಂಜೆ ಹರ್ಷ ಶೆಟ್ಟಿ ಹುತ್ತುರ್ಕೆ ಉಪಸ್ಥಿತರಿದ್ದರು. ರಾವೇಂದ್ರ ನಾಯ್ಕ ಸ್ವಾಗತಿಸಿ, ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net