ಕುಂದಾಪುರ: ಕುಲಕಸುಬುಗಳಿಗೆ ಶಕ್ತಿ ಸಿಗುವ ನಿಟ್ಟಿನಲ್ಲಿ ಐದು ದಿನಗಳ ಕಾಲ ತರಬೇತಿ ನೀಡಿ ಅವರು ಈಗಿರುವ ಕುಲಕಸುಬುಗಳನ್ನು ಸರಿಯಾಗಿ ವಾಡಬಹುದೆಂದು ಯೋಚಿಸಿ ಈ ನವೀಕೃತ ಉದ್ಯಮ ಉದ್ಯೋಗವನ್ನು ನವೀಕರಣಗೊಳಿಸಿ ವಿಶ್ವಕರ್ಮ ಯೋಜನೆಯವರು ಒಂದು ಲಕ್ಷ ರೂ.ಸಾಲ ನೀಡುತ್ತಿದ್ದು, ಆನಂತರ ಉದ್ಯೋಗಕ್ಕೆ ಶಕ್ತಿ ಬರಲಿ ಎಂದು ಹದಿನೈದು ಸಾವಿರ ಮೊತ್ತದ ಟೂಲ್ ಕಿಟ್ ನೀಡಲಾಗುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೋಟೇಶ್ವರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕೇಂದ್ರ ಸರ್ಕಾರದ ಮಹತ್ವಂಕಾಕ್ಷಿ ಯೋಜನೆಯಾದ ಪಿಎಂ ವಿಶ್ವಕರ್ಮ ಯೋಜನೆಯ ಸೌಲಭ್ಯ ವಿತರಣಾ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸವಲತ್ತು ವಿತರಿಸಿ ವಾತನಾಡಿದರು.
ಕುಂದಾಪುರ ಶಾಸಕ ಎ.ಕಿರಣ್ ಕುವಾರ್ ಕೊಡ್ಗಿ ವಾತನಾಡಿ, ಆರ್ಥಿಕ ಕಾರ್ಯಕ್ರಮಗಳಿಂದ ಹೊರಗುಳಿದ ಸಮುದಾಯಗಳನ್ನು ಬೆಂಬಲಿಸುವುದು ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ನೀಡುವುದು ಈ ವಿಶ್ವಕರ್ಮ ಯೋಜನೆ ಮುಖ್ಯ ಉದ್ದೇಶವಾಗಿದೆ ಎಂದರು.
ಕೋಟೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಗಿಣಿ ದೇವಾಡಿಗ, ಉಪಾಧ್ಯಕ್ಷೆ ಆಶಾ ವಿ., ಕೋಟೇಶ್ವರ ಗ್ರಾಮ ಪಂಚಾಯಿತಿ ಪಿಡಿಒ ದಿನೇಶ್ ನಾಯಕ್, ಕೋಟೇಶ್ವರ ಗ್ರಾಪಂ ಸದಸ್ಯರು, ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು. ಸಂಸದರ ಆಪ್ತ ಕಾರ್ಯದರ್ಶಿ ಹರೀಶ್ ಶೆಟ್ಟಿ ನಿರೂಪಿಸಿದರು.