

ಪಾಂಡವಪುರ: ತಾಲೂಕಿನ ಹರವು ಗ್ರಾಮದಲ್ಲಿ ಎಲ್‌ಬಿಎಲ್‌ಎಲ್ ನಾಲೆಗೆ ಸಮರ್ಪಕ ನೀರು ಹರಿಸುತ್ತಿಲ್ಲ ಎಂದು ಆರೋಪಿಸಿ ಹರವು ಗ್ರಾಮದ ರೈತರು ಶುಕ್ರವಾರ ಪಟ್ಟಣದ ವಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹರವು ಗ್ರಾಮದ ಹೊರವಲಯದ ಎಲ್‌ಬಿಎಲ್‌ಎಲ್ ನಾಲೆಯ ಕಾಮಗಾರಿಯನ್ನು 13 ವರ್ಷಗಳ ಹಿಂದೆಯೇ ಮಾಡಿದ್ದಾರೆ. ಈ ಕಾಮಗಾರಿ ಅಸಮರ್ಪಕವಾಗಿದ್ದು, ಕೊನೇ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ವಿಶ್ವೇಶ್ವರಯ್ಯ ನಾಲೆ, ಸಿಡಿಎಸ್ ನಾಲೆ ನೀರುಬಿಟ್ಟು ನಾಲ್ಕು ದಿನವಾದರೂ ಸಹ ನಮ್ಮ ಜಮೀನಿಗೆ ತಲುಪುತ್ತಿಲ್ಲ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆದಿರುವ ಬೆಳೆಯನ್ನು ಸಹ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಸಂಬಂಧವಾಗಿ ಹೀಗಾಗೆ ಎಇ, ಎಇಇ, ಎಸ್‌ಸಿಗಳಿಗೂ ಮನವಿ ಮಾಡಿದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿಲ್ಲ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಶ್ರೀನಿವಾಸ್, ಗೋಪಾಲ, ನಟರಾಜು, ವಾಸು, ನಾಗಣ್ಣ, ಕುಮಾರ್, ರಮೇಶ್, ಆನಂದ್, ಸುರೇಶ್, ಜಗದೀಶ್, ಸತೀಶ, ಎಚ್.ಕೆ.ಜಗದೀಶ, ಎಚ್.ಕೆ.ಜ್ಞಾನೇಶ, ಲೋಕೇಶ್, ಪ್ರಭಾಕರ, ಶ್ರೀನಿವಾಸ್, ಮಹದೇವು, ನಂದೀಶ, ಗೋವಿಂದ್ ಸೇರಿದಂತೆ ಹಲವರು ಇದ್ದರು.