ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ

15-RNR-04
Published on

ರಾಣೆಬೆನ್ನೂರ: ದೇವಾಂಗ ಸಮಾಜದವರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಆಗ್ರಹಿಸಿ ತಾಲೂಕು ದೇವಾಂಗ ಸಮಾಜದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಕೆಇಬಿ ಗಣೇಶ ದೇವಸ್ಥಾನದಿಂದ ಪ್ರತಿಭಟನೆ ಮೆರವಣಿಗೆ ಆರಂಭಿಸಿ ಪಿ.ಬಿ. ರಸ್ತೆ ಮೂಲಕ ಮಿನಿ ವಿಧಾನಸೌಧ ತಲುಪಿದರು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ದೇವಾಂಗ ಸಮಾಜದವರು ಹಿಂದುಳಿದವರಾಗಿದ್ದಾರೆ. ಸರ್ಕಾರದಿಂದ ಸವಲತ್ತುಗಳು 2ಎ ವರ್ಗದಲ್ಲಿ ಸಿಗುತ್ತಿಲ್ಲ. ನೇಕಾರಿಕೆ ಕುಂಠಿತವಾಗುತ್ತಿದೆ. ಸರ್ಕಾರ ದೇವಾಂಗ ಅಭಿವೃದ್ಧಿ ನಿಗಮ- ಮಂಡಳಿ ಸ್ಥಾಪಿಸಿ 2ಎ ವರ್ಗದಲ್ಲಿ ಮಹಾರಾಷ್ಟ್ರ ಮಾದರಿ ಶೇ. 2ರಷ್ಟು ಮೀಸಲಾತಿ ನೀಡಬೇಕು ಎಂದರು.

ತಹಸೀಲ್ದಾರ್ ಶಂಕರ ಜಿ.ಎಸ್. ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಮನೋಹರ ಮಲ್ಲಾಡದ, ಪ್ರಕಾಶ ಪಾಟೀಲ, ಸತ್ಯಪ್ಪ ತರಿಕೇರಿ, ಸತ್ಯನಾರಾಯಣ ದುರಿಗೇರಿ, ಮಂಜಪ್ಪ ಗಂಜಾಮದ, ರಮೇಶ ಗಂಜಾಮದ, ವಿಶ್ವನಾಥ ತಡಕನಳ್ಳಿ, ಗೌರಮ್ಮ ಗಂಜಾಮದ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net