ಚಂದ್ರಗಿರಿ ರಸ್ತೆ ದುರಸ್ತಿ ಆಗ್ರಹಿಸಿ ಧರಣಿ

protest
Published on

ಕಾಸರಗೋಡು : ನಗರದ ಚಂದ್ರಗಿರಿ ಜಂಕ್ಷನ್‌ನಿಂದ ಚಂದ್ರಗಿರಿ ಸೇತುವೆ ಮೂಲಕ ಕಾಞಂಗಾಡು ತೆರಳುವ ರಸ್ತೆಯನ್ನು ದರಸ್ತಿ ಮಾಡಲು ಒತ್ತಾಯಿಸಿ ಯುವ ಕಾಂಗ್ರೆಸ್ ಉದುಮ ಕ್ಷೇತ್ರ ಸಮಿತಿ ವತಿಯಿಂದ ಚಂದ್ರಗಿರಿ ಸೇತುವೆ ಬಳಿ ರಸ್ತೆ ತಡೆ ಧರಣಿ ನಡೆಸಲಾಯಿತು. ಡಿಸಿಸಿ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಹಕೀಂ ಕುನ್ನಿಲ್ ಧರಣಿ ಉದ್ಘಾಟಿಸಿ ಮಾತನಾಡಿ, ಚಂದ್ರಗಿರಿ ರಸ್ತೆ ಅಭಿವೃದ್ಧಿ ಕಾರ್ಯದಲ್ಲಿ ವ್ಯಾಪಕ ಭ್ರಷ್ಟಾಚಾರದಿಂದ ಕಾಮಗಾರಿ ಪೂರ್ತಿಗೊಂಡ ಒಂದೇ ದಿನದಲ್ಲಿ ಮತ್ತೆ ರಸ್ತೆ ಶಿಥಿಲಗೊಂಡಿದೆ. ಒಟ್ಟು ಕಾಮಗಾರಿ ಬಗ್ಗೆ ವಿಜಿಲೆನ್ಸ್ ತನಿಖೆ ನಡೆಸುವುದು ಅನಿವಾರ್ಯ ಎಂಬುದಾಗಿ ತಿಳಿಸಿದರು.

ಯುವ ಕಾಂಗ್ರೆಸ್ ಉದುಮ ಕ್ಷೇತ್ರದ ಅಧ್ಯಕ್ಷ ಐ.ಎಸ್.ವಸಂತನ್ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣನ್ ಚಟ್ಟಂಚಾಲ್, ಉಣ್ಣಿಕೃಷ್ಣನ್ ಪೊಯಿನಾಚಿ, ಮನ್ಸೂರ್ ಕುರಿಕಲ್, ಎನ್.ಬಾಲಚಂದ್ರನ್, ಅನ್ವರ್ ಮಾಙೌಡ್, ಗಿರಿಕೃಷ್ಣನ್ ಕೂಡಲ, ಸುಜಿತ್ ಕುಮಾರ್ ತಚ್ಚಂಗಾಡ್, ಸತ್ಯನಾಥನ್ ಪತ್ರವಳಪ್ಪಿಲ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net