ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಂದ ಪ್ರತಿಭಟನೆ

12-RNR-03
Published on

ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ

ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದಿಂದ ಕನಿಷ್ಠ ನಿರ್ವಹಣಾ ವೆಚ್ಚ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಗರದ ಮಿನಿ ವಿಧಾನಸೌಧ ಎದುರು ಅನ್​ಏಡೆಡ್ ಸ್ಕೂಲ್ ಮ್ಯಾನೇಜ್​ವೆುಂಟ್ ಅಸೋಸಿಯೇಷನ್ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ನೇತೃತ್ವ ವಹಿಸಿದ್ದ ಓಂ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷೆ ರುಕ್ಮಿಣಿ ಸಾವಕಾರ ಮಾತನಾಡಿ, ಕರೊನಾ ಲಾಕ್​ಡೌನ್​ನಿಂದಾಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಶಾಲೆಯ ನಿರ್ವಹಣೆ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಸಂಬಳ, ಶಾಲಾ ವಾಹನ ನಿರ್ವಹಣೆ, ವಿಮಾ ಕಂತು, ಸಿಬ್ಬಂದಿಯ ಪಿಎಫ್, ಬ್ಯಾಂಕ್ ಸಾಲದ ಕಂತು ತುಂಬಲು ಸಂಕಷ್ಟ ಎದುರಿಸುವಂತಾಗಿದೆ.

ಆದ್ದರಿಂದ ರಾಜ್ಯ ಸರ್ಕಾರ ಅನುದಾನ ರಹಿತ ಶಾಲೆಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಕನಿಷ್ಠ ಶೇ. 50ರಷ್ಟು ಗೌರವಧನ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಬಡ್ಡಿರಹಿತ ಓವರ್​ಡ್ರಾಫ್ಟ್ ಸೌಲಭ್ಯ ಒದಗಿಸಬೇಕು. ಶಾಲೆಗಳು ಆರಂಭಗೊಂಡ ಬಳಿಕ ರಿಯಾಯಿತಿ ದರದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಒದಗಿಸಬೇಕು. ಶಾಲೆಗಳಿಗೆ ಹೊರೆಯಾಗಿರುವ ಕಟ್ಟಡ ತೆರಿಗೆ, ವಾಹನ ತೆರಿಗೆ, ವಿಮೆ, ಭೂ ಬಾಡಿಗೆಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರ್ ಬಸನಗೌಡ ಕೋಟೂರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರಮುಖರಾದ ವಿಜಯ ಕುಲಕರ್ಣಿ, ಇರ್ಷಾದ್ ಬಳ್ಳಾರಿ, ಎಂ.ಎಂ. ಖನ್ನೂರ, ಶ್ರೀನಿವಾಸ ಸಾವಕಾರ, ಅಜಯ ರೆಡ್ಡಿ, ದತ್ತಾತ್ತೇಯ ಕಟ್ಟಿ, ವಿದ್ಯಾ ಹುದ್ದಾರ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net