ತಿಳವಳ್ಳಿ ಗ್ರಾಮಸ್ಥರಿಂದ ಪ್ರತಿಭಟನೆ

10 AKR 01
Published on

ಅಕ್ಕಿಆಲೂರ: ಡಾಂಬರ್ ಕಿತ್ತು ಗುಂಡಿ ಬಿದ್ದಿರುವ ರಸ್ತೆ ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿ ವಾಹನ ಸಂಚಾರ ಬಂದ್ ಮಾಡಿ ಸಮೀಪದ ತಿಳವಳ್ಳಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.

ಸ್ಥಳೀಯ ವ್ಯಾಪಾರಿಗಳು, ಅಂಗಡಿಗಳ ಮಾಲೀಕರು ಮತ್ತು ಗ್ರಾಮಸ್ಥರು, ತಳ್ಳುವ ಗಾಡಿಯೊಂದಿಗೆ ನಾ.ಸು. ಹರ್ಡೆಕರ್ ವೃತ್ತದಲ್ಲಿ ರಸ್ತೆ ಬಂದ್ ಮಾಡಿ, ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಗ್ರಾಪಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಾ.ಸು. ಹರ್ಡೆಕರ ವೃತ್ತದಿಂದ ಬ್ಯಾಡಗಿಗೆ ಸಂಪರ್ಕ ಕಲ್ಪಿಸುವ ಕೂಸನೂರ ಕ್ರಾಸ್​ವರೆಗೂ ರಸ್ತೆ ಸಂಪೂರ್ಣ ಹದಗೆಟ್ಟಿದೆ. ದೊಡ್ಡ ಗುಂಡಿಗಳಿದ್ದು, ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಶಾಲಾ- ಕಾಲೇಜ್​ಗಳಿಗೆ ಸಾವಿರಾರು ವಿದ್ಯಾರ್ಥಿಗಳು ಸಾಗಲು ಇದೇ ಪ್ರಮುಖ ರಸ್ತೆಯಾಗಿದೆ. ಮಕ್ಕಳು ಬಿದ್ದು ಗಾಯಗೊಳ್ಳುವ ಘಟನೆ ನಿತ್ಯ ಸಾಮಾನ್ಯವಾಗಿವೆ. ಪ್ರಮುಖ ವ್ಯಾಪಾರಿ ಸ್ಥಳವಾಗಿರುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದರಿಂದ ಜನತೆ ರೋಸಿ ಹೋಗಿದ್ದಾರೆ. ಕೆಸರು ಗದ್ದೆಯಂತಾಗಿರುವ ರಸ್ತೆ ದುರಸ್ತಿ ಮಾಡಲು ಲೋಕೋಪಯೋಗಿ ಇಲಾಖೆ ಮತ್ತು ಸ್ಥಳೀಯ ಗ್ರಾಪಂಗೆ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ನರೇಂದ್ರ ಬಸವಾ, ಹನುಮಂತಪ್ಪ ಕಲ್ಲೇರ, ರಮೇಶ ಉಪ್ಪಾರ, ಮಾರುತಿ ಈಳಿಗೇರ, ಹನುಮಂತಪ್ಪ ಶಿರಾಳಕೊಪ್ಪ, ಕುಮಾರ ಎತ್ತಿನಹಳ್ಳಿ, ಗಿರೀಶ ಸಜ್ಜನಶೆಟ್ಟರ, ಮಹಮ್ಮದ್ ಸಲೀಂ ಸವಣೂರ, ಗಫಾರಸಾಬ್ ಮೂಡಿ, ಅಬ್ದುಲ್ ರಹಮಾನ್ ಸಾಬ್ ಸವಣೂರು, ದಯಾ ಹಾವೇರಿ, ಮುನ್ನಾ ಕಾಗಿನೆಲೆ, ಮಧು ಹುನಗುಂದ, ಭರಮಣ್ಣ ಕುರುಬರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net