ಬಿಳಿಗಿರಿರಂಗನ ಬೆಟ್ಟದ ನಿವಾಸಿಗಳ ಪ್ರತಿಭಟನೆ

Oplus_131072
Oplus_131072
Published on

ಯಳಂದೂರು: ಭೂಮಿ ಒತ್ತುವರಿ ಸಂಬಂಧ ನೋಟಿಸ್ ನೀಡಿರುವ ಅರಣ್ಯ ಇಲಾಖೆಯ ಕ್ರಮ ಖಂಡಿಸಿ ಶನಿವಾರ ಬಿಳಿಗಿರಿರಂಗನಬೆಟ್ಟದ ನಿವಾಸಿಗಳು ಪ್ರತಿಭಟನೆ ನಡೆಸಿದರು.

ತಾಲೂಕಿನ ಬಿಳಿಗಿರಿರಂಗನಬೆಟ್ಟದ ಬಸ್ ನಿಲ್ದಾಣದ ಸಮೀಪದ ವೃತ್ತದಲ್ಲಿ ಅರಣ್ಯವಾಸಿ ಶ್ರೀವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನೂರಾರು ವರ್ಷಗಳಿಂದ ವಾಸಿಸುತ್ತಿರುವ ನಮಗೆ 1962-63ರಲ್ಲಿ ಜಮೀನು ಮಂಜೂರಾಗಿದೆ. ನಮ್ಮ ಪೂರ್ವಿಕರಿಂದಲೂ ನಾವು ಇಲ್ಲೇ ಜೀವನ ಸಾಗಿಸುತ್ತಾ ಬಂದಿದ್ದೇವೆ. ಅರಣ್ಯ ಇಲಾಖೆಯ ಪ್ರದೇಶವನ್ನು ಒತ್ತುವಾರಿ ಮಾಡಿಕೊಂಡಿರುವ ಬಗ್ಗೆ ವ್ಯಾಜ್ಯಗಳು ನಮ್ಮ ಮಧ್ಯ ಇಲ್ಲ. ಸರ್ವೇ ಮಾಡುವ ಸಮಯದಲ್ಲಿ ಅಕ್ಕಪಕ್ಕದ ಜಮೀನಿನವರಗೆ ತಿಳಿವಳಿಕೆ ಪತ್ರ ಸಹ ನೀಡಿಲ್ಲ. ಇದೀಗ ಅರಣ್ಯ ಇಲಾಖೆಯು ಒತ್ತುವಾರಿ ಮಾಡಿರುವ ಬಗ್ಗೆ ನೋಟಿಸ್ ನೀಡಿರುವುದು ಸರಿಯಾದ ಕ್ರಮವಲ್ಲ, ಇದರಿಂದ ಇಲ್ಲಿನ ನಿವಾಸಿಗಳ ಜಮೀನು ಕಿತ್ತುಕೊಳ್ಳುವ ಕೆಲಸ ಆಗುತ್ತಿದೆ. ಕುಡಿಯುವ ನೀರಿನ ಬಾಟಲ್, ಮನೆಗಳ ನಿರ್ಮಿಸಲು ಬೇಕಾಗಿರುವ ಸಾಮಾಗ್ರಿಗಳನ್ನು ತರುವುದಕ್ಕೆ ಚೆಕ್ ಪೋಸ್ಟ್ ನಲ್ಲಿ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು. ಜತೆಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಪ್ರತೀಪ್ ಕುಮಾರ್, ಶ್ರೀನಿವಾಸ್, ನಾಗೇಶನಾಯಕ, ಕಾಂತರಾಜು, ಸಂಪತ್‌ಕುಮಾರ್, ಮಂಜುನಾಥ, ನಾಗೇಂದ್ರನಾಯಕ, ಜಯಮ್ಮ, ಪುಟ್ಟಮ್ಮ, ಭಾಗ್ಯಮ್ಮ, ಸಾಕಮ್ಮ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net