ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಟನೆ

ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಟನೆ
Published on

ಪೊನ್ನಂಪೇಟೆ: ಪರೀಕ್ಷಾ ಕೊಠಡಿ ಹೊರಗೆ ಜನಿವಾರ ತೆಗೆಸಿ ಒಳ ಬಿಟ್ಟಿರುವ ಪ್ರಕರಣ ಖಂಡಿಸಿ ಪೊನ್ನಂಪೇಟೆ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ತಹಸೀಲ್ದಾರ್ ಮೋಹನ್ ಕುಮಾರ್ ಅವರ ಮೂಲಕ ಮನವಿ ಪತ್ರವನ್ನು ಸರ್ಕಾರಕ್ಕೆ ರವಾನಿಸಲಾಯಿತು.

ಸಂಘದ ಅಧ್ಯಕ್ಷ ರಾಘವೇಂದ್ರ ವೈಲಾಯ, ಮಾಜಿ ಅಧ್ಯಕ್ಷ ಪ್ರಭಾಕರ ನೆಲ್ಲಿತ್ತಾಯ, ಸದಸ್ಯ ಶಂಕರ ವೈಲಾಯ, ಸುದರ್ಶನ್ ಕೆದಿಲಾಯ, ಖಜಾಂಜಿ ಪವನ್ ಕಂಡಿಪಾಡಿತ್ತಾಯ,ಉಪಾಧ್ಯಕ್ಷ, ಶ್ರೀಪತಿ ಪಡಂತ್ತಾಯ, ಶಿವಪ್ರಸಾದ್, ಶಾರದಾ ಮಣಿ, ಸವಿತಾ ಯೋಗೀಶ್, ಚಂದ್ರಕಲಾ, ಲಲಿತಾ, ಕೆ.ಜಿ. ರಾಮಕೃಷ್ಣ, ನಟರಾಜ, ರಾಧಾಕೃಷ್ಣ ಕಣ್ಣಾರಾಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net