ಎಡರಂಗ ಸರ್ಕಾರದಿಂದ ಬೆಸ್ತರಿಗೆ ಸಂಕಷ್ಟ : ಕೆ.ವಿ.ಬಾಬು ಆರೋಪ: ಮೀನುಗಾರಿಕಾ ಕಚೇರಿ ಬಳಿ ಪ್ರತಿಭಟನೆ

protest
ಮೀನುಗಾರರ ಧರಣಿಯನ್ನು ಕೆ.ವಿ.ಬಾಬು ಉದ್ಘಾಟಿಸಿ ಮಾತನಾಡಿದರು. ಪಿ.ದಿನೇಶ್ ಬಂಬ್ರಾಣ, ಶಿವನ್ ತಾಳಿಪಡ್ಪು, ಹರಿಕೃಷ್ಣನ್, ಅಜಂತಾ ಬಾಬು ಸೋಮ ಮೊದಲಾದವರು ಪಾಲ್ಗೊಂಡಿದ್ದರು.
Published on

ಕಾಸರಗೋಡು: ಕೇರಳದ ಎಡರಂಗ ಸರ್ಕಾರ ಮೀನುಗಾರರ ಸವಲತ್ತುಗಳನ್ನು ತಡೆಹಿಡಿಯುವ ಮೂಲಕ ಮೀನುಗಾರರ ಜೀವನವನ್ನು ಮೂರಾಬಟ್ಟೆ ಮಾಡಿದೆ ಎಂದು ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಬಾಬು ತಿಳಿಸಿದರು.

ಕೇರಳ ಪ್ರದೇಶ ಮೀನು ಕಾರ್ಮಿಕರ ಸಂಘ(ಬಿಎಂಎಸ್) ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಕಾಸರಗೋಡು ಮೀನುಗಾರಿಕಾ ಕಚೇರಿಯ ಎದುರು ಧರಣಿ ಉದ್ಘಾಟಿಸಿ ಮಾತನಾಡಿದರು.

ಕರಾವಳಿ ಪ್ರದೇಶದಲ್ಲಿ ದುಡಿಯುತ್ತಿರುವ ಮೀನುಗಾರ ಮಹಿಳೆಯರು ಮತ್ತು ಕಾರ್ಮಿಕರ ಕಲ್ಯಾಣ ನಿಧಿಗಿರುವ ಮೊತ್ತವನ್ನು ಸವಲತ್ತು ತಡೆಹಿಡಿದಿರುವುದು ಖಂಡನೀಯ. ಬಡ ಮೀನು ಕಾರ್ಮಿಕರ ರಕ್ತಹೀರಲು ಮುಂದಾಗಿರುವ ಸರ್ಕಾರದ ಧೋರಣೆ ಮೀನುಗಾರನ್ನು ಸಂಕಷ್ಟದ ಸುಳಿಗೆ ಸಿಲುಕುವಂತೆ ಮಾಡಿದೆ ಎಂದರು.

ಕೇರಳ ಪ್ರದೇಶ ಮೀನುಗಾರರ ಒಕ್ಕೂಟ ಕಾಸರಗೋಡು ಜಿಲ್ಲಾಧ್ಯಕ್ಷ ಪಿ.ದಿನೇಶ್ ಬಂಬ್ರಾಣ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಪದಾಧಿಕಾರಿಗಳಾದ ಶಿವನ್ ತಾಳಿಪಡ್ಪು, ಹರಿಕೃಷ್ಣನ್, ಅಜಂತಾ ಬಾಬು ಸೋಮ, ಜನಾರ್ದನನ್ ಕಡಪ್ಪುರ, ವಾರ್ಡ್ ಕೌನ್ಸಿಲರ್ ಅಜಿತ್ ಕಡಪ್ಪುರ, ರಂಜಿತ್ ಕಡಪ್ಪುರ, ಅಶ್ವತಿ ಕಡಪ್ಪುರ, ಪ್ರಿಯೇಶ್ ಕುಂಬಳೆ, ಪ್ರಜಿತ್ ಕುಂಬಳೆ, ಶಶಿ ಉಪ್ಪಳ ಪಾಲ್ಗೊಂಡಿದ್ದರು. ಕೇರಳ ಪ್ರದೇಶ ಮೀನುಗಾರ ಜಿಲ್ಲಾ ಕಾರ್ಯದರ್ಶಿ ರಮೇಶ್ ಕಡಪ್ಪುರ ಸ್ವಾಗತಿಸಿದರು. ಪದ್ಮನಾಭ ಕಡಪ್ಪುರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net