

ಲಕ್ಷೆ್ಮೕಶ್ವರ: ಬಸ್ ಸೌಕರ್ಯ ಅವ್ಯವಸ್ಥೆ ವಿರುದ್ಧ ಪಟ್ಟಣದ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಸಂಘಟನೆಯ ಕಾರ್ಯಕರ್ತರು ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಪಟ್ಟಣದಿಂದ ಗದಗಗೆ ಶಾಲೆ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ನಿತ್ಯವೂ ಬಸ್ ಕೊರತೆಯಿಂದ ತೊಂದರೆ ಪಡುತ್ತಿದಾರೆ. ಪ್ರತಿ ದಿನ ಬೆಳಗ್ಗೆ 7 ರಿಂದ 8.30ರವರೆಗೆ ಲಕ್ಷೆ್ಮೕಶ್ವರ ಪಟ್ಟಣದಿಂದ ಗದಗಿನ ಕಡೆಗೆ ಹೋಗಲು ಸರಿಯಾದ ಬಸ್ನ ವ್ಯವಸ್ಥೆ ಇಲ್ಲದೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿ್ತ್ಲ ಈ ಸಮಸ್ಯೆಯ ಬಗ್ಗೆ ಘಟಕ ವ್ಯವಸ್ಥಾಪಕರಿಗೆ ಅನೇಕ ಬಾರಿ ಮನವಿ, ಪೋನ್ ಕರೆ ಮಾಡಿದರು ಸ್ಪ್ಪದನೆ ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಸ್ಥಳಕ್ಕೆ ಘಟಕದ ವ್ಯವಸ್ಥಾಪಕರ ಪರವಾಗಿ ಆಗಮಿಸಿದ್ದ ಸಿಬ್ಬಂದಿ ಮತ್ತು ಪಿಎಸ್ಐ ಈರಪ್ಪ ರಿತ್ತಿ ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ, ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಮನವೊಲಿಸಿದರು.
ಮಾಂತೇಶ ಮಣಕವಾಡ, ಪ್ರವೀಣ ಬನ್ನಿಕೊಪ್ಪ, ಅಭಿಷೇಕ ಕ್ಯಾದಿಗೇರಿ, ಚೇತನ್ ಗೊಣೆಪ್ಪನವವರ, ನಾಗರಾಜ ಕೆ., ರಾಘು, ಅನಿಲ ಬಟ್ಟೂರ ಇತರರಿದ್ದರು.