ಕಳೆಂಜದಲ್ಲಿ ಮನವಿ ಸಲ್ಲಿಕೆ

New Project (14)
Published on

ಕೊಕ್ಕಡ: ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ವತಿಯಿಂದ ಕಸ್ತೂರಿರಂಗನ್ ವರದಿ ವಿರೋಧಿಸಿ ಪ್ರತಿಭಟನೆ ಗ್ರಾ.ಪಂ. ವಠಾರದಲ್ಲಿ ನಡೆಯಿತು. ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಶಿರಾಡಿ ಮಾತನಾಡಿದರು.

ಕಳೆಂಜ ಗ್ರಾ.ಪಂ. ಉಪಾಧ್ಯಕ್ಷ ವಿಶ್ವನಾಥ ಗೌಡ, ಮಲೆನಾಡು ಹಿತರಕ್ಷಣಾ ವೇದಿಕೆಯ ಜನ ಸಂಪರ್ಕ ಸಮಿತಿ ಸದಸ್ಯ ಕರುಣಾಕರ ಶಿಶಿಲ ಹಾಗೂ ಸಮಿತಿ ಸದಸ್ಯರಾದ ನವೀನ್ ರೆಖ್ಯ. ಕಳೆಂಜ ಅರಣ್ಯ ಸಮಿತಿಯ ಅಧ್ಯಕ್ಷ ಧನಂಜಯ ಗೌಡ, ಮಲೆನಾಡು ಹಿತರಕ್ಷಣಾ ಜಿಲ್ಲಾ ಸಮಿತಿ ಸದಸ್ಯ ಜೋಯಿ ಪುದುವೆಟ್ಟು, ವಸಂತ ಕಳೆಂಜ, ಗ್ರಾ.ಪಂ. ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಗ್ರಾ.ಪಂ. ನಿಕಟಪೂರ್ವಾಧ್ಯಕ್ಷ ಪ್ರಸನ್ನ ಸ್ವಾಗತಿಸಿದರು. ಗ್ರಾ.ಪಂ. ಸದಸ್ಯ ಹರೀಶ್ ಕೊಯಿಲ ವಂದಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೊನ್ನಮ್ಮ ಕೆ. ಹಾಗೂ ಕಾರ್ಯದರ್ಶಿ ಹೊನ್ನಪ್ಪ ಗೌಡ ಎಂ. ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net