ಸಿಎಂ ನಿಂದಿಸಿದ ಸಂದೇಶ ವೈರಲ್ - ಸರ್ಕಾರಿ ನೌಕರನ ಕೃತ್ಯ

Untitled-1
Published on

ಪುತ್ತೂರು: ವಕ್ ಭೂಮಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಹಿಯಾಳಿಸಿದ ಸಂದೇಶವನ್ನು ಉಪ್ಪಿನಂಗಡಿ ಕಂದಾಯ ಇಲಾಖೆ ಅಽಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚುತ್ತಿದ್ದಾರೆಂಬ ಸಂದೇಶ ವೈರಲ್ ಆಗಿದೆ.

ಪಹಣಿಯ ಚಿತ್ರವನ್ನು ಹಾಕಿ ಅದರ ಮೇಲೆ ತಾವು ಕುರುಬ, ಹಿಂದುಳಿದ, ತುಳಿತಕ್ಕೊಳಗಾದ ಸಮುದಾಯ, ಅಹಿಂದ ರಕ್ಷಕ ಎಂಬ ಕಾರಣಕ್ಕಾಗಿ ಸಿದ್ದರಾಮಯ್ಯನವರನ್ನು ಕುರುಡಾಗಿ ಬೆಂಬಲಿಸುವ ಅವರ ಅಭಿಮಾನಿಗಳೇ, ಈಗ ಕುರುಬರ ಕುಲದೈವ ಬೀರೇದೇವರ ಗುಡಿಯೂ ವಕ್ ಆಸ್ತಿ ಅಂತೆ. ಈಗಲಾದರೂ ವಕ್ ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸುತ್ತಿರೋ ಅಥವ ಇನ್ನೂ ಅವರನ್ನೇ ಬೆಂಬಲಿಸುವಿರೋ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಲಾಗಿದೆ.

ಸರ್ಕಾರಿ ಅಽಕಾರಿ ಹಾಕಿದ ಸಂದೇಶದ ಜತೆಗೆ ಈಗ ಸರ್ಕಾರಿ ಅಽಕಾರಿಗಳೇ ಸರ್ಕಾರದ ವಿರುದ್ಧ ಮಾತನಾಡುವ ಹಂತಕ್ಕೆ ಹೋಗಿದೆ ಎಂಬ ಸಂದೇಶ ವೈರಲ್ ಆಗಿದೆ. ಶಾಸಕ ಅಶೋಕ್ ಕುಮಾರ್ ರೈ ಅಽಕಾರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net