ಓಮ್ನಿ ಆಕ್ಟಿವ್ ಹೆಲ್ತ್ ಟೆಕ್ನಾಲಜೀಸ್ ವಿರುದ್ಧ ಪ್ರತಿಭಟನೆ

ಓಮ್ನಿ ಆಕ್ಟಿವ್ ಹೆಲ್ತ್ ಟೆಕ್ನಾಲಜೀಸ್ ವಿರುದ್ಧ ಪ್ರತಿಭಟನೆ
Published on

ಹಾಸನ: ರೈತರಿಂದ ಚಂಡು ಹೂ ಖರೀದಿಸಿ ಹಣ ಪಾವತಿಸಲು ಕಂಪನಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದರು.

ನಗರದ ಹೊರ ವಲಯ ಕೈಗಾರಿಕ ಪ್ರದೇಶ ಹೊಳೆನರಸೀಪುರ ರಸ್ತೆ ಬಳಿಯಿರುವ ಓಮ್ನಿ ಆಕ್ಟಿವ್ ಹೆಲ್ತ್ ಟೆಕ್ನಾಲಜೀಸ್ ಲಿಮಿಟೆಡ್ ಕಂಪನಿ ಮುಂದೆ ಸುಮಾರು 200 ಜನ ರೈತರು ಪ್ರತಿಭಟಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹರಪನಹಳ್ಳಿಯ ಹೂ ಖರೀದಿದಾರ ಕುಬೇರಪ್ಪ, ಹಾಸನ ಕೈಗಾರಿಕಾ ಪ್ರದೇಶದಲ್ಲಿರುವ ಓಮ್ನಿ ಆಕ್ಟಿವ್ ಹೆಲ್ತ್ ಟೆಕ್ನಾಲಜೀಸ್ ರೈತರಿಂದ ಹೂವು ಖರೀದಿಸುತ್ತಿದ್ದು, ಹಣ ಪಾವತಿಸಿಲ್ಲ. ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಬೆಳಗ್ಗೆ ಹೂ ಕತ್ತರಿಸಿ ತಂದುಕೊಡಿ ಎಂದು ಹೇಳಿ, ಸಂಜೆ ವೇಳೆಗೆ ಬೇಡ ಎಂದು ತಿರಸ್ಕರಿಸುತ್ತಾರೆ. ಒಂದು ಎಕರೆಯಲ್ಲಿ ಎರಡು ಟನ್ ಮಾತ್ರ ತೆಗೆದುಕೊಂಡು, ಉಳಿದ ಆರು-ಏಳು ಟನ್ ಹೂವು ಹೊಲದಲ್ಲೇ ಬಾಡುತ್ತಿದೆ. 20 ದಿನಗಳಿಂದ ಹಣ ಸಿಗದೆ ರೈತರು ನಮ್ಮ ಮನೆ ಬಾಗಿಲಿಗೆ ಬರುತ್ತಿದ್ದಾರೆ ಎಂದರು.

ಹಾವೇರಿ, ದಾವಣಗೆರೆ, ಹರಪನಹಳ್ಳಿ, ವಿಜಯನಗರ, ಕೊಪ್ಪಳ ವಿವಿಧ ಜಿಲ್ಲೆಗಳಿಂದ ರೈತರು ಬಂದಿದ್ದರು. ರೈತರೊಂದಿಗೆ ಸರಿಯಾದ ಒಪ್ಪಂದ ಮಾಡಿಕೊಂಡು ಪಾವತಿ ಖಚಿತಪಡಿಸಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಯುತ್ತೇವೆ. ಕಂಪನಿಯ ಮುಖ್ಯಸ್ಥರು ಸ್ಥಳಕ್ಕೆ ಬಂದು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವಿವಿಧ ಭಾಗದಿಂದ ಬಂದಿದ್ದ ರೈತರಾದ ಪುಟ್ಟಪ್ಪ, ರಮೇಶ್, ಸುರೇಶ್, ಬಸವರಾಜು, ಕಿರಣ್ ಕುಮಾರ್, ಚೌಡೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net