ಅಸಮರ್ಪಕ ಬಸ್​ ಸೌಲಭ್ಯ ಖಂಡಿಸಿ ಪ್ರತಿಭಟನೆ

Protest Symbol
Published on

ಮುರಗೋಡ: ಅಸಮರ್ಪಕ ಬಸ್​ ವ್ಯವಸ್ಥೆ ಖಂಡಿಸಿ ಶಾಲಾ&ಕಾಲೇಜು ವಿದ್ಯಾರ್ಥಿಗಳು ಬಸ್​ ತಡೆದು ಸಮೀಪದ ತಡಸಲೂರ ಗ್ರಾಮದಲ್ಲಿ ಈಚೆಗೆ ಪ್ರತಿಭಟನೆ ನಡೆಸಿದರು. ಶಿಕ್ಷಣ ಪಡೆಯಲು ನಿತ್ಯ ನೂರಾರು ವಿದ್ಯಾರ್ಥಿಗಳು ತಡಸಲೂರ ಗ್ರಾಮದಿಂದ ಮುರಗೋಡ, ಬೆಲಹೊಂಗಲಕ್ಕೆ ತೆರಳಬೇಕಿದೆ. ಬೆಳಗ್ಗೆ ಗೋಕಾಕ ಮತ್ತು ಬೆಲಹೊಂಗಲ ಟಕದ ಎರಡು ಬಸ್​ ಮಾತ್ರ ಇರುವುದರಿಂದ ಜನದಟ್ಟಣೆ ಉಂಟಾಗಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರಿತಪಿಸುವಂತಾಗಿದೆ ಎಂದು ಪ್ರತಿಭಟನಾ ನಿರತರು ದೂರಿದರು. ಬೆಲಹೊಂಗಲ ಟಕದ ಹಿರಿಯ ಅಧಿಕಾರಿಗಳು ಹೆಚ್ಚುವರಿ ಬಸ್​ ಆರಂಭಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಮುಖಂಡರಾದ ಬಸು ಬೂದಿಹಾಳ, ವಿಜಯ ಬೀರಗಡ್ಡಿ, ರಾಮು ಮಾಡಮಗೇರಿ, ಲ್ಮಣ ಈರಣ್ಣವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net