

ಅಂಕೋಲಾ: ಇಂಧನ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಇಳಿಸುವುದು, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ರೈತ ವಿರೋಧಿ ಕಾನೂನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ನಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಎತ್ತಿನ ಗಾಡಿಯಲ್ಲಿ ದ್ವಿಚಕ್ರ ವಾಹನ ಇಟ್ಟು ಮತ್ತು ಮಹಿಳೆಯರು ತಲೆ ಮೇಲೆ ಗ್ಯಾಸ್ ಸಿಲಿಂಡರ್ ಹೊತ್ತು ಪಟ್ಟಣದ ವಿವಿಧ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರಮುಖರಾದ ರಮಾನಂದ ನಾಯಕ, ವಿನೋದ ನಾಯಕ, ಬಿ.ಡಿ. ನಾಯ್ಕ, ಸುಜಾತಾ ಗಾಂವಕರ, ಶಂಭು ಶೆಟ್ಟಿ, ಪಾಂಡುರಂಗ ಗೌಡ ಮಾತನಾಡಿ, ಬೆಲೆ ಏರಿಕೆಯಿಂದ ರೈತರಿಗೆ, ಮೀನುಗಾರರಿಗೆ ಹಾಗೂ ಜನಸಾಮಾನ್ಯರಿಗೆ ಆಗುವ ತೊಂದರೆಗಳನ್ನು ಪರಿಹರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ತಹಸೀಲ್ದಾರ್ ಉದಯ ಕುಂಬಾರ ಮೂಲಕ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಜಿಪಂ ಸದಸ್ಯರಾದ ಉಷಾ ಡಿ. ನಾಯ್ಕ, ಸರಳಾ ನಾಯಕ, ತಾಪಂ ಉಪಾಧ್ಯಕ್ಷೆ ತುಳಸಿ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ಸದಸ್ಯರಾದ ಶಾಂತಿ ಆಗೇರ, ಹಿಂದುಳಿದ ವರ್ಗದ ಅಧ್ಯಕ್ಷ ಮೊನ್ನಪ್ಪ ನಾಯ್ಕ ಭಾವಿಕೇರಿ, ಪುರಸಭೆ ಸದಸ್ಯರಾದ ಪ್ರಕಾಶ ಗೌಡ, ಜಯಪ್ರಕಾಶ ನಾಯ್ಕ, ಶಬ್ಬೀರ ಶೇಖ್, ವಿಶ್ವನಾಥ ನಾಯ್ಕ, ಕೆ.ಎಚ್. ಗೌಡ, ಗೌರೀಶ ನಾಯಕ, ಮಾದೇವ ಗೌಡ ಬೆಳಂಬಾರ, ಪುರುಷೋತ್ತಮ ನಾಯ್ಕ, ಶ್ರೀಕಾಂತ ದುರ್ಗೆಕರ, ಶೋಭಾ ನಾಯ್ಕ, ಜೀವಿತ ಗಾಂವಕರ, ಮಂಜುಳಾ ವೆರ್ಣೆಕರ, ನಿರ್ಮಲಾ ನಾಯಕ, ಸುರೇಶ ನಾಯ್ಕ, ಉದಯಕುಮಾರ ನಾಯ್ಕ, ರಾಜೇಶ ಎಂ.ನಾಯ್ಕ ಇತರರು ಪಾಲ್ಗೊಂಡಿದ್ದರು.