ಇಂಧನ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

15 svr 01
Published on

ಸವಣೂರ: ಕೃಷಿ ಕಾಯ್ದೆ ತಿದ್ದುಪಡಿ, ಇಂಧನ, ದಿನಬಳಕೆ ವಸ್ತುಗಳ ದರ ಏರಿಕೆ ಖಂಡಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಎಪಿಎಂಸಿಯಿಂದ ಕಂದಾಯ ಇಲಾಖೆ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಮಾನವ ಸರಪಳಿ ನಿರ್ವಿುಸಿ ಟಯರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಭಾರಿ ತಹಸೀಲ್ದಾರ್ ಸಿ.ಎಸ್. ಜಾಧವ್ ಮೂಲಕ ರಾಜ್ಯಪಾಲ, ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಸೋಮಣ್ಣ ಬೇವಿನಮರದ, ಷಣ್ಮುಖ ಶಿವಳ್ಳಿ, ಎಂ.ಎಂ. ಹಿರೇಮಠ, ನಾಗಪ್ಪ ತಿಪ್ಪಕ್ಕನವರ, ಜಗದೀಶ ಕಂಬಾಳಿಮಠ, ಶಿವಕುಮಾರ ಅಡವಿಸ್ವಾಮಿಮಠ, ಶ್ರೀಕಾಂತ ದುಂಡಿಗೌಡ್ರ, ಶಿವರಾಜ ಅಮರಾಪುರ, ರಮೇಶ ದುಗ್ಗತ್ತಿ, ಅದ್ದು ಪರಾಶ, ಶ್ರೀಧರ ದೊಡ್ಡಮನಿ, ಮಹಾಂತೇಶ ಸಾಲಿ, ಉಮೇಶ ಕಲ್ಮಠ, ರವಿ ಕರಿಗಾರ, ಸುಭಾಸ ಮಜ್ಜಗಿ, ಗಿರೀಶ ಅಂಗಡಿ, ನವೀನ ಬಂಡಿವಡ್ಡರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net