ಕಾಂಗ್ರೆಸ್ ಸರ್ಕಾರದಿಂದ ಜನರ ಲೂಟಿ : ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಟೀಕೆ

New Project (35)
Published on

ಉಳ್ಳಾಲ: ಗ್ಯಾರಂಟಿ ಭಾಗ್ಯದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ 9/11 ನಿವೇಶನಗಳ ಸಮಸ್ಯೆಗಳ, ಅಕ್ರಮ-ಸಕ್ರಮ ಅರ್ಜಿ ತಿರಸ್ಕಾರ, ಬಡವರ ಆಶ್ರಯ ಮನೆಗಳ ಮಂಜೂರಾತಿ ಮತ್ತು ಅನುದಾನ ನೀಡಿಲ್ಲ. ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ಹಣ ಬಿಡುಗಡೆ ಮಾಡಿಲ್ಲ, ಬಿಪಿಎಲ್ ಕಾರ್ಡ್ ರದ್ಧತಿ ಅಲ್ಲದೆ ನಿರಂತರ ವಿದ್ಯುತ್ ದರ, ಹಾಲಿನ ದರ ಏರಿಸುವ ಮೂಲಕ ಜನರನ್ನು ಲೂಟಿ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಟೀಕಿಸಿದರು.

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಅದಕ್ಷ ಆಡಳಿತದ ವಿರುದ್ಧ ಅಂಬ್ಲಮೊಗರು ಗ್ರಾಪಂ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದು, ಲಂಚದ ಹಾವಳಿ ಮಿತಿಮೀರಿದೆ. ಬಡವರು ಮನೆ ಕಟ್ಟಬೇಕಾದರೆ ಅದಕ್ಕೆ ಬೇಕಾದ ಕೆಂಪುಕಲ್ಲು, ಹೊಯಿಗೆ ಸಿಗುತ್ತಿಲ್ಲ. ಈ ರೀತಿ ಜನಸಾಮಾನ್ಯರಿಗೆ ಹೊರೆಯಾಗಿ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.

ಅಂಬ್ಲಮೊಗರು ಶಕ್ತಿ ಕೇಂದ್ರದ ಅಧ್ಯಕ್ಷ ನವೀನ್, ಜಿಲ್ಲಾ ಪ್ರಕೋಷ್ಠದ ಬ್ರಿಜೇಶ್ ನಾಯರ್, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಹರೀಶ್ ಅಂಬ್ಲಮೊಗರು, ಮಂಡಲ ಕಾರ್ಯಕಾರಿ ಸದಸ್ಯರಾದ ರಾಜೇಶ್ ಆಚಾರ್ಯ ಕಂಡಿಲ, ಗಂಗಾಧರ್ ಆಂಚನ್ ಕೋಟೆದಡಿ, ವಾಮನ್ ಪೂಜಾರಿ ಚಾಪು, ರಂಜಿತ್ ತಿಲಕ್ ನಗರ, ಬೂತ್ ಅಧ್ಯಕ್ಷರಾದ ಪ್ರಕಾಶ್ ತಿಲಕ್ ನಗರ, ದಿನೇಶ್ ಕೆರೆಬಳಿ, ಸುಕುಮಾರ್, ಶಿವಪ್ಪ ಪೂಜಾರಿ ಪ್ರಮುಖರು ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net