ದೇವದಾಸಿ ಪದ್ಧತಿಯಿಂದ ಯುವತಿ ರಕ್ಷಣೆ

ಕುರುಗೋಡು ಸಮೀಪದ ವದ್ದಟ್ಟಿ ಕ್ರಾಸ್ ನಿವಾಸಿ ಕುಟುಂಬದ ಒತ್ತಡದಿಂದ ದೇವದಾಸಿ ಪದ್ಧತಿಗೆ ಬಲಿಯಾಗುತ್ತಿದ್ದ ಯುವತಿ ಪ್ರೀತಿಸಿದಯುವಕನೊಂದಿಗೆ ನಗರದ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಮದುವೆಯಾದರು. ಪಿಎಸ್‌ಐ ಸುಪ್ರೀತ್ ವಿರೂಪಾಕ್ಷಪ್ಪ, ದೇವದಾಸಿ ಮಹಿಳಾ ವಿಮೋಚನಾ ಸಂಘದ ಅಧ್ಯಕ್ಷೆ ಎಚ್.ಯಂಕಮ್ಮ, ಪುರಸಭೆ ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಪ್ರಮುಖರಾದ ಯಲ್ಲಾಪುರ ಬೀಳಬಾಯಿ, ವದ್ದಟ್ಟಿ ಕ್ರಾಸ್‌ನ ಶಿವಕುಮಾರ್, ರವಿ, ಗಾದಿಲಿಂಗಪ್ಪ, ದೇವದಾಸಿ ನಾಗಮ್ಮ ಇತರರಿದ್ದರು.

Published on

ಕುರುಗೋಡು: ದೇವದಾಸಿ ಪದ್ಧತಿಗೆ ಬಲಿಯಾಗುತ್ತಿದ್ದ ಯುವತಿಯನ್ನು ರಕ್ಷಿಸಿ ಪ್ರೀತಿಸಿದ ಯುವಕನೊಂದಿಗೆ ಮದುವೆ ಮಾಡಿಸಿ ಬದುಕು ಕಲ್ಪಿಸಿಕೊಟ್ಟ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಮೀಪದ ವದ್ದಟ್ಟಿ ಕ್ರಾಸ್ ನಿವಾಸಿ ಯುವತಿಯ ಕುಟುಂಬಸ್ಥರು ಮೂಢನಂಬಿಕೆಯಿಂದ ದೇವದಾಸಿ ಪದ್ಧತಿಯಲ್ಲಿ ಮುತ್ತು ಕಟ್ಟಲು ಮುಂದಾಗಿದ್ದರು. ಇದರಿಂದ ಎಚ್ಚತ್ತ ಯುವತಿ ಅದೇ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದ ವಿಷಯ ಸಂಬಂಧಿಕರಿಗೆ ತಿಳಿಸಿ ಅವರ ನೆರವಿನಿಂದ ದೇವದಾಸಿ ಮಹಿಳಾ ವಿಮೋಚನಾ ಸಂಘದ ಮೊರೆ ಹೋಗಿದ್ದಳು.

ದೇವದಾಸಿ ವಿಮೋಚನಾ ಸಂಘದ ಅಧ್ಯಕ್ಷೆ ಎಚ್.ಯಂಕಮ್ಮ ಯುವತಿ ಮತ್ತು ಯುವಕನೊಂದಿಗೆ ಪೊಲೀಸ್ ಠಾಣೆಗೆ ಹೋದಾಗ ಪಿಎಸ್‌ಐ ಸುಪ್ರೀತ್ ವಿರೂಪಾಕ್ಷಪ್ಪ ಅವರು ಎರಡೂ ಕುಟುಂಬದ ಸದಸ್ಯರನ್ನು ಕರೆಸಿ ವಿಚಾರಿಸಿದರು. ಅನಿಷ್ಟ ದೇವದಾಸಿ ಪದ್ಧತಿ ಬಗ್ಗೆ ಕಾನೂನಿನ ಅರಿವು ಮೂಡಿಸಿದರು. ಕುಟುಂಬದವರ ಮನವೊಲಿಸಿ ಪಟ್ಟಣದ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಮುಖಂಡರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಯುವಕ-ಯುವತಿ ಪರಸ್ಪರ ಹಾರ ಬದಲಾಯಿಸಿ ನೂತನ ಬದುಕಿಗೆ ಕಾಲಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net